ಕರಾವಳಿ

ಡಿ.23: ಬೆದ್ರಾಳದಲ್ಲಿ ‘ಶ್ರೀಮಾ ಥೀಮ್ ಪಾರ್ಕ್’ ಲೋಕಾರ್ಪಣೆ

ಪುತ್ತೂರು: ಕಳೆದ 10 ವರ್ಷಗಳಲ್ಲಿ 19ಕ್ಕೂ ಅಧಿಕ ಬಡಾವಣೆಗಳನ್ನು ಜನಸಾಮಾನ್ಯರಿಗೆ ಅವರ ನಿರೀಕ್ಷೆಗೆ ಅನುಗುಣವಾಗಿ ನೀಡುತ್ತಾ ಬಂದಿರುವ ಯು.ಆರ್.ಪ್ರಾಪರ್ಟೀಸ್‌ನ ಮಾಲಕ ಉಜ್ವಲ್ ಕುಮಾರ್ ಪ್ರಭು ಅವರ ಕನಸಿನ ಇನ್ನೊಂದು ಯೋಜನೆಯಾಗಿರುವ ‘ಶ್ರೀಮಾ ಥೀಮ್ ಪಾರ್ಕ್’ ಡಿ.23ಕ್ಕೆ ಬೆದ್ರಾಳದಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಕಳೆದ 10 ವರ್ಷದಿಂದ ನಮ್ಮ ಸಂಸ್ಥೆ ಈ ಎಲ್ಲಾ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಬೆದ್ರಾಳದಲ್ಲಿ 10.62 ಎಕ್ರೆ ಜಾಗದಲ್ಲಿ ಅನುಮೋದಿತ ಬಡಾವಣೆ ನಿರ್ಮಾಣ ಮಾಡಿದ್ದೇವೆ. ಅದಕ್ಕೆ ‘ ಶ್ರೀಮಾ ಥೀಂ ಪಾರ್ಕ್’ ಎಂದು ನಾಮಕರಣ ಮಾಡಿ, ಅದರ ಮೂಲಕ ಸುಮಾರು 100 ಸೈಟ್‌ಗಳನ್ನು ಮಾಡಿದ್ದೇವೆ. ಬೆದ್ರಾಳದಲ್ಲಿ ಆಧುನಿಕ ರೀತಿಯಲ್ಲಿ  ವಿನ್ಯಾಸಗೊಳಿಸಲಾಗಿರುವ ಬಡಾವಣೆಯಲ್ಲಿ ಸುಸಜ್ಜಿತ ರಸ್ತೆ, ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರು, ಉದ್ಯಾನವನ, ವ್ಯಾಯಾಮ ಕೇಂದ್ರ ಮತ್ತು ಈಜುಕೊಳ ವ್ಯವಸ್ಥೆಯಿದ್ದು ಪ್ರತೀ ಗ್ರಾಹಕರಿಗೆ ಸಂಪೂರ್ಣ ಮನಃ ಶಾಂತಿಯನ್ನು ನೀಡಲಿದೆ ಎಂದು ಯು.ಆರ್.ಪ್ರಾಪರ್ಟೀಸ್ ನ ಮಾಲಕ ಉಜ್ವಲ್ ಪ್ರಭು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!