ದರ್ಬೆಯಲ್ಲಿ ಶುಭಾರಂಭಗೊಂಡ ಟೋಯ್ ಗ್ಯಾಲರಿಯಲ್ಲಿ ಆಫರ್
ಪುತ್ತೂರು: ಟೋಯ್ಸ್, ಸೈಕಲ್, ಬ್ಯಾಟರಿ ಚಾಲಿತ ಜೀಪು, ಸ್ಕೂಟರ್, ವಾಚ್, ಗಿಫ್ಟ್‌ಐಟಂ, ಬ್ಯಾಗ್ ಸೇರಿದಂತೆ ಮಕ್ಕಳ ಸಂಪೂರ್ಣ ಆಟಿಕೆಗಳ ಮಳಿಗೆ ‘ಟೋಯ್ ಗ್ಯಾಲರಿ’ ಡಿ.೧೮ರಂದು ದರ್ಬೆ ಲಿಟ್ಲ್ ಫ್ಲವರ್ ಶಾಲಾ ಮುಂಭಾಗದಲ್ಲಿ ಶುಭಾರಂಭಗೊಂಡಿದ್ದು ಶುಭಾರಂಭದ ಪ್ರಯುಕ್ತ ಡಿ.21ರ ವರೆಗೆ ಅಮೋಘ ಆಫರ್ ಪ್ರಕಟಿಸಲಾಗಿದೆ.

ಆಫರ್ ಗೆ ಗ್ರಾಹಕರಿಂದ ಭರಪೂರ ಸ್ಪಂದನೆ ವ್ಯಕ್ತವಾಗಿದ್ದು ನಿರೀಕ್ಷೆಗೂ ಮೀರಿದ ಗ್ರಾಹಕರು ಟೋಯ್ ಗ್ಯಾಲರಿಗೆ ಆಗಮಿಸಿ ಮಕ್ಕಳಿಗೆ ಆಟಿಕೆಗಳನ್ನು ಖರೀದಿಸುತ್ತಿರುವ ದೃಶ್ಯ ಕಂಡು ಬಂದಿದೆ. ಭಾರೀ ದರಕಡಿತ ಮಾರಾಟಕ್ಕೆ ಗ್ರಾಹಕರು ಸಂತಸ ವ್ಯಕ್ತಪಡಿಸಿದ್ದಾರೆ. ಡಿ.21ರಂದು ಆಫರ್ ಮುಕ್ತಾಯಗೊಳ್ಳಲಿದೆ ಎಂದು ಟೋಯ್ ಗ್ಯಾಲರಿಯ ಮಾಲಕರು ತಿಳಿಸಿದ್ದಾರೆ.




