ಕರಾವಳಿಕ್ರೈಂ

ನೀರು ಸೇದುತ್ತಿದ್ದಾಗ ತಾಯಿಯ ಕೈಯಿಂದ ಜಾರಿ ಬಾವಿಗೆ ಬಿದ್ದು ಮಗು ಮೃತ್ಯು!

ಸಾಂದರ್ಭಿಕ ಚಿತ್ರ



ಉಡುಪಿ: ತಾಯಿಯ ಕೈಯಿಂದ ಆಕಸ್ಮಿಕವಾಗಿ ಜಾರಿ ಬಾವಿಗೆ ಬಿದ್ದ ಒಂದು ವರ್ಷ ಎರಡು ತಿಂಗಳ ಮಗುವೊಂದು ಮೃತಪಟ್ಟ ಘಟನೆ ಮಂಗಳವಾರ ಉಡುಪಿ ಕಿನ್ನಿಮುಲ್ಕಿಯ ಬಳಿ ನಡೆದಿದೆ.


ಮಗುವಿನ ತಾಯಿ, ಮಗುವನ್ನು ಎತ್ತಿಕೊಂಡೇ ಮನೆಯ ಸಮೀಪದ ಬಾವಿಯಿಂದ ನೀರು ಸೇದುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.ಈ ವೇಳೆ ಮಗು ಆಕೆಯ ಕೈಯಿಂದ ಜಾರಿ ಬಾವಿಗೆ ಬಿದ್ದಿದೆ ಎನ್ನಲಾಗಿದೆ. ಕೂಡಲೇ ತಾಯಿ ಹಗ್ಗದ ಸಹಾಯದಿಂದ ಬಾವಿಗೆ ಇಳಿದು ಮಗುವನ್ನು ಹೊರತೆಗೆದಿದ್ದಾರೆ. ಆದರೆ, ಅಷ್ಟರಾಗಲೇ ಮಗು ಮೃತಪಟ್ಟಿತ್ತು.

Leave a Reply

Your email address will not be published. Required fields are marked *

error: Content is protected !!