ಕರಾವಳಿಕ್ರೈಂ

ಫೇಸ್ಬುಕ್ ನಲ್ಲಿ ಮುಖ್ಯಮಂತ್ರಿ ಮತ್ತು ಬಾನು ಮುಸ್ತಾಕ್ ಬಗ್ಗೆ ಅಸಭ್ಯ ಪದಗಳಲ್ಲಿ ನಿಂದಿಸಿ ಪೋಸ್ಟ್-ಆರೋಪಿ ವಶಕ್ಕೆ

ಸುಳ್ಯ: ಫೇಸ್ಬುಕ್ ನಲ್ಲಿ purush acharya  ಎಂಬ ಹೆಸರಿನ ಖಾತೆಯಿಂದ ದಸರಾ ಉದ್ಘಾಟನೆ ಮಾಡಿದ ಬಾನು ಮುಸ್ತಾಕ್ ರವರ ಬಗ್ಗೆ ಮತ್ತು ಮುಖ್ಯ ಮಂತ್ರಿಗಳ ಬಗ್ಗೆ ಅಸಭ್ಯ ಪದಗಳಲ್ಲಿ ನಿಂದಿಸಿ ಪೋಸ್ಟ್ ಮಾಡಿದ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅಕ್ರ  112/2025 ಕಲಂ 296,196,354 BNS ಹಾಗೂ ಸುಬ್ರಹ್ಮಣ್ಯ ಠಾಣೆಯಲ್ಲಿ 55/2025 ಕಲಂ 353(3),353(4) BNS ರಂತೆ ಪ್ರಕರಣಗಳು ದಾಖಲಾಗಿದೆ.

ಈ ಬಗ್ಗೆ  ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ  ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ನ ಸಹಕಾರದಿಂದ ಸುಳ್ಯ ಪೊಲೀಸರು ಪ್ರಕರಣದ ಆರೋಪಿ ಪುರುಷೋತ್ತಮ ಆಚಾರ್ಯ ಬರಿಮಾರು ಬಂಟ್ವಾಳ ತಾಲೂಕು ಎಂಬಾತನನ್ನು  ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿರುತ್ತದೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!