ಕರಾವಳಿ

ಕೊಂಬೆಟ್ಟು ಟ್ರ್ಯಾಕ್ಟ‌ರ್ ಸಹಿತ ಬಾವಿಗೆ ಬಿದ್ದು ಯುವಕ ಮೃತ್ಯು

ಯುವಕನೋರ್ವ ಆಕಸ್ಮಿಕವಾಗಿ ಟ್ರ್ಯಾಕ್ಟ‌ರ್ ಸಹಿತ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನೆಲ್ಲಿಕಾರು ಗ್ರಾಪಂ ವ್ಯಾಪ್ತಿಯ ಮಾಂಟ್ರಾಡಿ ಕೊಂಬೆಟ್ಟು ಎಂಬಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.


ರಾಜೇಶ್ (38) ಮೃತಪಟ್ಟವರು. ಟ್ರ್ಯಾಕ್ಟರ್‌ ಅನ್ನು ತೊಳೆಯುತ್ತಿದ್ದ ಸಂದರ್ಭ ಟ್ರ್ಯಾಕ್ಟರ್ ಬಾವಿಯ ಕಡೆಗೆ ಚಲಿಸಲಾರಂಭಿಸಿದ್ದು ತಡೆದು ನಿಲ್ಲಿಸಲು ಮುಂದಾದ ರಾಜೇಶ್ ಕೂಡಾ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್‌ನೊಂದಿಗೆ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತರು ಪತ್ನಿ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!