ಕರಾವಳಿಕ್ರೈಂ

ವಿಮಾನದಲ್ಲಿ ಹೈಟ್ರೋಪೋನಿಕ್ ಗಾಂಜಾ ಸಾಗಾಟ: ಆರೋಪಿಯ ಬಂಧನ


ಮಂಗಳೂರು: ಮುಂಬೈ ನಿಂದ ವಿಮಾನದ ಮೂಲಕ ಹೈಡೋ ಪೋನಿಕ್ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಓರ್ವನನ್ನು ಸಿಐಎಸ್ಎಫ್ ಸಿಬ್ಬಂದಿ ಸೋಮವಾರ ವಶಕ್ಕೆ ಪಡೆದು ಬಟ್ಟೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತನನ್ನು ಶಂಕ‌ರ್ ನಾರಾಯಣ್ ಪೊದ್ದಾರ್ ಎಂದು ಗುರುತಿಸಲಾಗಿದೆ.

ಈತ ಸೋಮವಾರ ಸಂಜೆ 6:30ಕ್ಕೆ ಮುಂಬೈನಿಂದ ಮಂಗಳೂರಿಗೆ ಬಂದ ಇಂಡಿಗೋ ವಿಮಾನದಲ್ಲಿ ಹೈಡೋ ಪೋನಿಕ್ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ಸಿಬ್ಬಂದಿ, ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಸಿಬಿಎಸ್‌ಎಫ್‌ಗೆ ಮಾಹಿತಿ ನೀಡಿದ್ದರು.


ಅದರಂತೆ ಆರೋಪಿ ಸಂಜೆ ಇಂಡಿಗೋ ವಿಮಾನದಲ್ಲಿ ಬಂದು ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು. ಈ ವೇಳೆ ಶಂಕ‌ರ್ ನಾರಾಯಣ್ ಪೊದ್ದಾರ್ ನ ಚೆಕ್-ಇನ್ ಬ್ಯಾಗೇಜ್‌ನಲ್ಲಿ ಸುಮಾರು 512 ಗ್ರಾಂ. ಹೈಡೋಪೋನಿಕ್ ಗಾಂಜಾ ಪತ್ತೆಯಾಗಿತ್ತು. ತಕ್ಷಣ ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ರವಾನಿಸಿ ಪತ್ತೆಯಾದ ಗಾಂಜಾ ಸಹಿತ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಬಜ್ಪೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!