ಅಲ್ ಇಹ್ಸಾನ್ ಟ್ರಾವೆಲ್ಸ್ ಉಮ್ರಾ ತರಬೇತಿ ಶಿಬಿರ ಹಾಗೂ ಹಜ್ ಯಾತ್ರೆಯ ಪಾಸ್ ಪೋರ್ಟ್ ಸ್ವೀಕಾರ
ಪುತ್ತೂರು: ಅಲ್ ಇಹ್ಸಾನ್ ಟ್ರಾವೆಲ್ಸ್ ಆಶ್ರಯದಲ್ಲಿ ಖ್ಯಾತ ಹಜ್ ಉಮ್ರಾ ಅಮೀರ್ ಉಸ್ತಾದ್ ಸಿರಾಜುದ್ದೀನ್ ಫೈಝಿ ಬಪ್ಪಳಿಗೆ ನೇತೃತ್ವದಲ್ಲಿ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಯಾತ್ರೆ ಹೊರಡಲಿರುವ ಉಮ್ರಾ ಯಾತ್ರಿಕರಿಗೆ ತರಬೇತಿ ಶಿಬಿರ ಪುತ್ತೂರು ಬದ್ರಿಯಾ ಮಸೀದಿಯ ಮದ್ರಸಾ ಹಾಲ್ ನಲ್ಲಿ ನಡೆಯಿತು. ಸಾಲ್ಮರ ಸಯ್ಯಿದ್ ಯಹ್ಯಾ ತಂಙಳ್ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿದರು. ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಸಮಿತಿ ಅಧ್ಯಕ್ಷ ಅಬ್ದುಲ್ ರಹ್ಮಾನ್ ಅಝಾದ್ ಅಧ್ಯಕ್ಷತೆ ವಹಿಸಿದ್ದರು.

ಹಜ್ ಯಾತ್ರೆಗೆ ಪಾಸ್ ಪೋರ್ಟ್ ಸ್ವೀಕಾರ:
ಖಾಸಗಿ ಗ್ರೂಪ್ ನಲ್ಲಿ ಹಜ್ ಯಾತ್ರೆ ಬಯಸಿರುವ ಯಾತ್ರಿಕರಿಂದ ಪಾಸ್ ಪೋರ್ಟ್ ಸ್ವೀಕರಿಸಿ, ಹಜ್ ಬುಕ್ಕಿಂಗ್ ಪ್ರಾರಂಭಿಸಲಾಯಿತು.
ಓಲೆಮುಂಡೇವು ಮಹಮೂದುಲ್ ಫೈಝಿ, ಸಂಪ್ಯ ಅಬ್ದುಲ್ ಹಮೀದ್ ದಾರಿಮಿ, ಪುತ್ತೂರು ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಎಲ್.ಟಿ.ಅಬ್ದುಲ್ ರಝಾಕ್ ಹಾಜಿ, ಶಕೂರು ಹಾಜಿ, ಪುತ್ತು ಬಾವ ಹಾಜಿ, ಅದ್ದಿ ಹಾಜಿ ಸಾಲ್ಮರ ಶುಭ ಹಾರೈಸಿ ಮಾತನಾಡಿದರು.
ವೇದಿಕೆಯಲ್ಲಿ
ಅಬ್ಬಾಸ್ ಮದನಿ, ಅಶ್ರಫ್ ಫೈಝಿ ಕೊಡಗು ,ಅಶ್ರಫ್ ದಾರಿಮಿ,ಹಮೀದ್ ಮುಸ್ಲಿಯಾರ್ ಬೊಳ್ವಾರ್,ಕೆ.ಎಂ.ಕೊಡುಂಗಾಯಿ,ಅನ್ವರ್ ಮುಸ್ಲಿಯಾರ್, ಅಬ್ದುಲ್ ಅಝೀಝ್ ಯಮಾನಿ,ಮುಫತ್ತಿಶ್ ಹನೀಫ್ ಮುಸ್ಲಿಯಾರ್, ಇಸ್ಮಾಯಿಲ್ ಹಾಜಿ ಸೌತ್ ಇಂಡಿಯಾ,ಬಿ.ಹೆಚ್ . ಮುಹಮ್ಮದ್ ಹಾಜಿ, ಗುರುಪುರ ಮಿಸ್ರಿಯಾ ಟ್ರಾವೆಲ್ಸ್ ನ ಹಂಝ ಹಾಜಿ, ಉಪ್ಪಿನಂಗಡಿ ಮೈನಾ ಶಕೂರು ಹಾಜಿ ಮೊದಲಾದವರು ಉಪಸ್ಥಿತರಿದ್ದರು.
ಮಖಾಂ ಝಿಯಾರತ್: ಕಾರ್ಯಕ್ರಮದ ಪ್ರಾರಂಭದಲ್ಲಿ ಪುತ್ತೂರು ಕರವಡ್ತ ವಲಿಯುಲ್ಲಾಹಿ ತಂಙಳ್ ರವರ ಮಖಾಂ ಝಿಯಾರತ್ ನಡೆಯಿತು. ಬದ್ರಿಯಾ ಮಸೀದಿಯ ಖತೀಬರಾದ ಅಬ್ಬಾಸ್ ಮದನಿ ಝಿಯಾರತ್ ನೇತೃತ್ವ ವಹಿಸಿದರು. ಸೆಪ್ಟೆಂಬರ್ 18 ಹಾಗೂ ಅಕ್ಟೋಬರ್ 2ಕ್ಕೆ ತಲಾ ಎರಡು ತಂಡಗಳಾಗಿ ಯಾತ್ರೆ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೆಪ್ಟೆಂಬರ್ ತಿಂಗಳ ಯಾತ್ರಾ ತಂಡಗಳು 18ಕ್ಕೆ ಹೊರಡಲಿದ್ದು, ಅಕ್ಟೋಬರ್ ತಿಂಗಳದ್ದು 2ರಂದು ಹೊರಡಲಿದೆ.
ಚೀಫ್ ಅಮೀರಾಗಿ ಉಸ್ತಾದ್ ಸಿರಾಜುದ್ದೀನ್ ಫೈಝಿಯವರು ಕಾರ್ಯ ನಿರ್ವಹಿಸಲಿದ್ದು, ಸಹಾಯಕ ಅಮೀರರನ್ನೂ ಮಹಿಳಾ ಯಾತ್ರಿಕರ ಸೇವೆಗಳಿಗೆ ಮಹಿಳಾ ಅಮೀರರನ್ನೂ ನೇಮಕ ಮಾಡಲಾಗಿದೆ ಎಂದು ಅಲ್ ಇಹ್ಸಾನ್ ಟ್ರಾವೆಲ್ಸ್ ನ ಮಸೂದ್ ದರ್ಬೆ ತಿಳಿಸಿದ್ದಾರೆ.