ದ್ವಿಚಕ್ರ ವಾಹನದಲ್ಲಿ ಮೂವರು ಬಾಲಕರ ಪ್ರಯಾಣ:
ಪೋಷಕರಿಗೆ 27,500 ರೂ. ದಂಡ
ಮಂಗಳೂರು: ದ್ವಿಚಕ್ರ ವಾಹನವೊಂದರಲ್ಲಿ ಪ್ರಯಾಣಿಸುತ್ತಿದ್ದ ಮೂವರು ಅಪ್ರಾಪ್ತ ವಯಸ್ಸಿನ ಬಾಲಕರನ್ನು ಪತ್ತೆಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಪೋಷಕರಿಗೆ 27,500 ರೂ. ದಂಡ ವಿಧಿಸಿ ಸೆ.3ರಂದು ತೀರ್ಪು ನೀಡಿದೆ.
ಬಜ್ಪೆ ಪೊಲೀಸ್ ಠಾಣೆಯ ಪಿ.ಎಸ್.ಐ ಸಿಬ್ಬಂದಿಯೊಂದಿಗೆ ಆ.28ರಂದು ಸಂಜೆ ಬಜ್ಜೆ ಪೇಟೆಯಲ್ಲಿವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಒಂದು ದ್ವಿಚಕ್ರ ವಾಹನದಲ್ಲಿ ಮೂವರು ಬಾಲಕರು ಸಂಚರಿಸುತ್ತಿರುವುದನ್ನು ಪತ್ತೆ ಹಚ್ಚಿದ್ದರು. ಬಳಿಕ ವಾಹನ ಸಹಿತ ಮೂವರು ಬಾಲಕರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಪೋಷಕರು ದ್ವಿಚಕ್ರ ವಾಹನ ನೀಡಿರುವುದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.