ಕರಾವಳಿಕ್ರೈಂ

ಗಿರೀಶ್ ಮಟ್ಟಣ್ಣನವ‌ರ್ ವಿರುದ್ದ ಮತ್ತೊಂದು ದೂರು

ಬೆಳ್ತಂಗಡಿ: ಸಾಮಾಜಿಕ ಜಾಲತಾಣದಲ್ಲಿ ಗಿರೀಶ್ ಮಟ್ಟಣ್ಣನವ‌ರ್, ಸಾರ್ವಜನಿಕರಿಗೆ ಕಿರಿಕಿರಿಯುಂಟಾಗುವ ರೀತಿಯಲ್ಲಿ ಅಶ್ಲೀಲವಾಗಿ ಮಾತನಾಡಿ ವೀಡಿಯೋದ ತುಣುಕನ್ನು ಜನತಾ ನ್ಯೂಸ್ ನಲ್ಲಿ ಹರಿಯಬಿಟ್ಟಿರುವ ಬಗ್ಗೆ ಗಿರೀಶ್ ಮಟ್ಟಣ್ಣನವ‌ರ್ ವಿರುದ್ಧ ರಾಜೇಂದ್ರ ದಾಸ್ ಡಿ. ಧರ್ಮಸ್ಥಳ ಎಂಬವರು ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸೆ.1ರಂದು ರಾಜೇಂದ್ರ ದಾಸ್ ಡಿ ಧರ್ಮಸ್ಥಳ ಎಂಬವರು ಉಜಿರೆ ಗ್ರಾಮದ ಉಜಿರೆ ಎಂಬಲ್ಲಿ ತನ್ನ ಮೊಬೈಲ್ ಮುಖೇನ ಸಾಮಾಜಿಕ ಜಾಲತಾಣವನ್ನು ವೀಕ್ಷಿಸುತ್ತಿರುವಾಗ ಗಿರೀಶ್ ಮಟ್ಟಣ್ಣವರ್, ಸಾರ್ವಜನಿಕರಿಗೆ ಕಿರಿಕಿರಿಯುಂಟಾಗುವ ರೀತಿಯಲ್ಲಿ ಅಶ್ಲೀಲವಾಗಿ ಮಾತನಾಡಿ ವೀಡಿಯೋದ ತುಣುಕನ್ನು ಜನತಾ ನ್ಯೂಸ್ ನಲ್ಲಿ ಹರಿಯಬಿಟ್ಟಿರುವುದಾಗಿದೆ ಎಂದು ಪಿರ್ಯಾದಿದಾರರು ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಅಕ್ರ: 101/2025 ಕಲಂ:296 BNS ನಂತೆ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!