ಕರಾವಳಿ

ಸರ್ವೆ ಕಲ್ಪಣೆ ಸ.ಹಿ.ಪ್ರಾ ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವ




ಪುತ್ತೂರು: ಸರ್ವೆ ಕಲ್ಪಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿ ಧ್ವಜಾರೋಹಣಗೈದು ಜಾತಿ ಮತ ಬೇಧ ಮರೆತು ನಾವೆಲ್ಲರೂ ಸೌಹಾರ್ದತೆಯಿಂದ ಬಾಳಬೇಕಾಗಿದೆ ಎಂದರು.


ಶಾಲಾ ಮುಖ್ಯಗುರು ಕಮಲ ಪ್ರಾಸ್ತಾವನೆಗೈದು ಸ್ವಾಗತಿಸಿದರು.
ಸವಣೂರು ಪ.ಪೂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಿ ವಿ ಸೂರ್ಯನಾರಾಯಣ ಎಲಿಯ, ಧಾರ್ಮಿಕ ದತ್ತಿ ಇಲಾಖೆಯ ಜಿಲ್ಲಾ ಸಮಿತಿ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಮುಂಡೂರು ಗ್ರಾ.ಪಂ ಸದಸ್ಯ ಕರುಣಾಕರ ಗೌಡ ಎಲಿಯ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಧಾಕೃಷ್ಣ ರೈ ರೆಂಜಲಾಡಿ, ಆರ್.ಐ.ಸಿ ಚೇರ್ಮನ್ ಕೆ ಆರ್ ಹುಸೈನ್ ದಾರಿಮಿ ರೆಂಜಲಾಡಿ, ಧ.ಗ್ರಾ.ಯೋ. ಒಕ್ಕೂಟ ಅಧ್ಯಕ್ಷ ಸುಂದರ ಬಲ್ಯಾಯ ನೆಕ್ಕಿಲು ಮಾತನಾಡಿದರು.



ಗ್ರಾ.ಪಂ ಸದಸ್ಯೆ ರಸಿಕ ರೈ ಮೇಗಿನಗುತ್ತು, ರೆಂಜಲಾಡಿ ಜಮಾಅತ್ ಕಾರ್ಯದರ್ಶಿ ಜೈನುದ್ದೀನ್ ಹಾಜಿ ಜೆ ಎಸ್, ಹನುಮಾನ್ ಫ್ರೆಂಡ್ಸ್ ಕಲ್ಪಣೆ ಅಧ್ಯಕ್ಷ ಹೇಮರಾಜ್ ರೆಂಜಲಾಡಿ, ಅಡಿಕೆ ವರ್ತಕ
ಸಂಘದ ಜಿಲ್ಲಾ ಸದಸ್ಯ ಇಬ್ರಾಹಿಂ ಅಜ್ಜಿಕಲ್ಲು ಹಾಗೂ  ವಿದ್ಯಾಭಿಮಾನಿಗಳು, ವಿದ್ಯಾರ್ಥಿ ಪೋಷಕರು, ಎಸ್ಡಿಎಂಸಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಮೀನಾಕ್ಷಿ ಸೊರಕೆ, ಸದಸ್ಯರಾದ ಗಣೇಶ್ ನೆರೋಲ್ತಡ್ಕ, ಚಂದ್ರಶೇಖರ್ ನೆಕ್ಕಿಲು, ಬಶೀರ್ ಪರಾಡ್, ಜಯಪ್ರಕಾಶ್ ಶೆಟ್ಟಿ ರೆಂಜಲಾಡಿ,
ಹಂಝ ಕೂಡುರಸ್ತೆ ಹಾಗೂ ಸದಸ್ಯರು ಸಹಕರಿಸಿದರು.
ಶಿಕ್ಷಕಿಯರಾದ ಉಮಾವತಿ ರೈ ರೆಂಜಲಾಡಿ, ಅನಿತಾ ಶೆಟ್ಟಿ, ಅವಿತಾ ರೈ ವಿವಿಧ ಕಾರ್ಯಕ್ರಮವನ್ನು  ನಡೆಸಿಕೊಟ್ಟರು
  ಶಿಕ್ಷಕಿ ದೀಕ್ಷಾ ರೈ ವಂದಿಸಿದರು.  ಶಿಕ್ಷಕಿ ಜ್ಯೋತಿ ಸಿ ಜೆ  ಕಾರ್ಯಕ್ರಮ ನಿರೂಪಿಸಿದರು.  ವಿದ್ಯಾರ್ಥಿಗಳಿಂದ  ವೈವಿಧ್ಯಮಯ ಕಾರ್ಯಕ್ರಮ ನಡೆಯಿತು.
ವಿವಿಧ ಸಂಘ ಸಂಸ್ಥೆ, ವಿದ್ಯಾಭಿಮಾನಿಗಳ ವತಿಯಿಂದ ಸಿಹಿ ತಿಂಡಿ ಹಾಗೂ ಪಾನೀಯಗಳ ವ್ಯವಸ್ಥೆ ಮಾಡಲಾಯಿತು
ಅಡುಗೆ ಸಿಬ್ಬಂದಿಗಳು ಸಹಕರಿಸಿದರು.

Leave a Reply

Your email address will not be published. Required fields are marked *

error: Content is protected !!