ಬಂಟ್ವಾಳ: ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ
ಬಂಟ್ವಾಳ: ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಸಾಗರ್ (28ವ) ಎಂಬ ಯುವಕನ ಮೃತದೇಹ ಪತ್ತೆಯಾದ ಘಟನೆ ಜೂ.16ರಂದು ಬಂಟ್ವಾಳ ತಾಲೂಕಿನಲ್ಲಿ ವರದಿಯಾಗಿದೆ.

ಈ ಬಗ್ಗೆ ಮೃತ ಯುವಕನ ತಂದೆ ಅಮ್ಮುಂಜೆ, ಬೆಂಜನಪದವು ನಿವಾಸಿ ಜನಾರ್ಧನ್ ಪೂಜಾರಿ ಎಂಬವರು ದೂರು ನೀಡಿದ್ದು ಮಗ ಸಾಗರ್ (28) ಪೈಟಿಂಗ್ ಕೆಲಸ ಮಾಡಿಕೊಂಡಿದ್ದು, ದಿನಾಂಕ 14.06.2025 ರಂದು ಮಗನು ಪತ್ನಿ ಬೇಬಿರವರೊಂದಿಗೆ ಬಿಸಿ ರೋಡ್ ಗೆ ಔಷಧವನ್ನು ಪಡೆಯಲು ಹೆಂಡತಿ ಮಕ್ಕಳೊಂದಿಗೆ ಆಟೋದಲ್ಲಿ ಹೋಗಿದ್ದವರು ವಾಪಸ್ ಬರುವಾಗ ಬೆಂಜನಪದವು ಮೂರು ಮಾರ್ಗ ಎಂಬಲ್ಲಿ ಇಳಿದಿರುತ್ತಾರೆ. ಆ ಬಳಿಕ ನಾಪತ್ತೆಯಾಗಿದ್ದ ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ದಿನಾಂಕ 16.06.2025 ರಂದು ದೂರು ದಾಖಲಿಸಿದ್ದರು.
ಪ್ರಕರಣ ಮುಂದುವರಿದಂತೆ ದಿನಾಂಕ 16.06.2025 ರಂದು ಸಾಗರ್ ಮೃತದೇಹ ವಿದ್ಯಾನಗರ ರಸ್ತೆಯ ಹೈಸ್ಕೂಲ್ ರೋಡ್ ಬಳಿ ಕಂಡುಬಂದಿರುವುದಾಗಿ ಜನಾರ್ಧನ್ ಪೂಜಾರಿ ಅವರಿಗೆ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ತೆರಳಿ ಮೃತದೇಹವನ್ನು ದೃಢಪಡಿಸಿರುತ್ತಾರೆ. ಸಾಗರ್ ರವರು ಹೊಂಡದಲ್ಲಿ ಬಿದ್ದು ಮೃತಪಟ್ಟಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.





