ಕರಾವಳಿಕ್ರೈಂಜಿಲ್ಲೆ

ಮಂಗಳೂರು: ಗುಂಪು ಹತ್ಯೆ ಪ್ರಕರಣ, ಅಶ್ರಫ್ ಮೃತದೇಹವನ್ನು ಊರಿಗೆ ಕೊಂಡೊಯ್ದ  ಕುಟುಂಬಸ್ಥರು

ಮಂಗಳೂರು: ನಗರ ಹೊರವಲಯದ ಕುಡುಪು ಸಮೀಪ   ಗುಂಪು ಹತ್ಯೆಗೀಡಾದ ಕೇರಳದ ಅಶ್ರಫ್ ಅವರ ಮೃತದೇಹವನ್ನು ಕೇರಳದ ವಯನಾಡಿನಿಂದ ಮಂಗಳೂರಿಗೆ ಆಗಮಿಸಿದ ಅವರ ಮನೆಮಂದಿ ಇಂದು ಬೆಳಗ್ಗಿನ ಜಾವ ಊರಿಗೆ ಕೊಂಡೊಯ್ದಿದ್ದಾರೆ.


ಕೇರಳದ ವಯನಾಡು ಜಿಲ್ಲೆಯ ಪುಲ್ಪಳ್ಳಿ ನಿವಾಸಿ ಅಶ್ರಫ್ ಅವರ ಕಿರಿಯ ಸಹೋದರ ಜಬ್ಬಾರ್
ಮೃತದೇಹದ ಗುರುತು ಹಿಡಿದಿದ್ದಾರೆ ಎನ್ನಲಾಗಿದೆ.


ಹತ್ಯೆಯ ಬಗ್ಗೆ ಮಾಧ್ಯಮದಲ್ಲಿ ಮಾಹಿತಿ ಪಡೆದಿದ್ದ ಅಶ್ರಫ್ ಕುಟುಂಬಸ್ಥರು ಮಂಗಳವಾರ ತಡರಾತ್ರಿ 12:30ರ ಸುಮಾರಿಗೆ ಮಂಗಳೂರಿಗೆ ಆಗಮಿಸಿದ್ದರು. ಅಶ್ರಫ್ ಅವರ ಸಹೋದರ ಸೇರಿದಂತೆ ಆಗಮಿಸಿದ್ದ ಮೂವರು ವೆನ್ಲಾಕ್ ಶವಾಗಾರದಲ್ಲಿರಿಸಿದ್ದ ಮೃತದೇಹ ಅಶ್ರಫ್ ಅವರದ್ದೆಂದು ಗುರುತಿಸಿದರು. ಈ ಹಿನ್ನೆಲೆಯಲ್ಲಿ ಕಾನೂನು ಪ್ರಕ್ರಿಯೆಯನ್ನು ಮುಗಿಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.



ಬಳಿಕ ಮೃತದೇಹವನ್ನು ಬಂದರ್ ನ ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿಗೆ ಕೊಂಡೊಯ್ಯಲಾಯಿತು. ಅಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ ಬೆಳಿಗ್ಗೆ 4:30ರ ಸುಮಾರಿಗೆ ಮೃತದೇಹವನ್ನು ಆಂಬುಲೆನ್ಸ್ ಮೂಲಕ ಊರಿಗೆ ಕೊಂಡೊಯ್ಯಲಾಯಿತು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!