ವೇದನಾಥ ಸುವರ್ಣ ಅವರಿಂದ ಪುರುಷರಕಟ್ಟೆ ಮಸೀದಿಯಲ್ಲಿ ಸೌಹಾರ್ದ ಇಫ್ತಾರ್ ಕೂಟ
ಪುತ್ತೂರು: ಜಾತ್ಯಾತೀತ ನಾಯಕ ವೇದನಾಥ ಸುವರ್ಣ ನರಿಮೊಗರು ಅವರು ಪುರುಷರಕಟ್ಟೆಯ ಹಿಮಾಯತುಲ್ ಇಸ್ಲಾಂ ಮದ್ರಸ ವಠಾರದಲ್ಲಿ ಮಾ.29ರಂದು ಇಫ್ತಾರ್ ಏರ್ಪಡಿಸಿ ಮಾದರಿಯಾಗಿದ್ದಾರೆ.

ಮುಸ್ಲಿಂ ಸೌಹಾರ್ದ ವೇದಿಕೆಯವರು ಇಫ್ತಾರ್ ಆಯೋಜನೆಗೆ ಸಹಕಾರ ನೀಡಿದರು. ಇಫ್ತಾರ್ ಕೂಟದಲ್ಲಿ 250ಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು. ಸೌಹಾರ್ದತೆಯ ಸಂದೇಶ ಸಾರಿದ ವೇದನಾಥ ಸುವರ್ಣರ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ರಾಜಕೀಯ ನಾಯಕರೂ ಆಗಿರುವ ವೇದನಾಥ ಸುವರ್ಣ ಅವರು ದ.ಕ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿದ್ದಾರೆ.
ವೇದನಾಥ ಸುವರ್ಣ ಅವರು ಜಾತಿ, ಮತ, ಧರ್ಮ ನೋಡದೇ ಎಲ್ಲರೊಂದಿಗೆ ಬೆರೆಯುವ ನಾಯಕರಾಗಿದ್ದು ಅವರು ನಮ್ಮ ಮದ್ರಸದಲ್ಲಿ ಇಫ್ತಾರ್ ಕೂಟ ಆಯೋಜಿಸುವ ಮೂಲಕ ಸಮಾಜಕ್ಕೆ ಸೌಹಾರ್ದತೆಯ ಸಂದೇಶ ಸಾರಿದ್ದಾರೆ ಎಂದು ಇಫ್ತಾರ್ ಕೂಟದಲ್ಲಿ ಭಾಗವಹಿಸಿದವರು ತಿಳಿಸಿದ್ದಾರೆ.





