ಮಂಗಳೂರು: ಮರದ ಕೊಂಬೆ ಮುರಿದು ಬಿದ್ದು ಮೂವರು ವಿದ್ಯಾರ್ಥಿನಿಯರಿಗೆ ಗಾಯ
ಮಂಗಳೂರು: ಮರದ ಕೊಂಬೆಯೊಂದು ಮುರಿದು ಬಿದ್ದ ಪರಿಣಾಮ ಮೂವರು ವಿದ್ಯಾರ್ಥಿನಿಯರು ಗಾಯಗೊಂಡ ಘಟನೆ ನಗರದ ಹಂಪನಕಟ್ಟೆ ಜಂಕ್ಷನ್ ಬಳಿಯ ಶೆಟ್ಟಿ ಆಟೋ ಪಾರ್ಕ್ ಬಳಿ ನಡೆದಿದೆ.

ಮಲ್ಲೂರು ಉದ್ದಬೆಟ್ಟು ನಿವಾಸಿಗಳಾದ ಮರಿಯಂ ಮುಫೀದಾ (18), ಫಾಹಿಮಾ ಮರಿಯಂ (17) ಹಾಗೂ ಅಬ್ಬೆಟ್ಟು ನಿವಾಸಿ ಅಫ್ರತ್ (18) ಗಾಯಗೊಂಡವರು ಎಂದು ತಿಳಿದು ಬಂದಿದೆ.
ನಗರದ ಬಲ್ಮಠದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯರಾಗಿರುವ ಇವರು ಮಾ.17ರಂದು ಸಂಜೆ ಹಂಪನಕಟ್ಟೆಯ ಬಳಿ ಮನೆಗೆ ತೆರಳಲು ಸಂಜೆ ಬಸ್ಸಿಗೆ ಕಾಯುತ್ತಿದ್ದಾಗ ಮರದ ಕೊಂಬೆ ಬಿತ್ತು ಎನ್ನಲಾಗಿದೆ. ಹಲವು ಮಂದಿ ಇಲ್ಲಿಯೇ ಬಸ್‌ಗೆ ಕಾಯುತ್ತಿದ್ದರು ಎನ್ನಲಾಗಿದ್ದು, ಬಹುತೇಕ ಮಂದಿ ಅಪಾಯದಿಂದ ಪಾರಾಗಿದ್ದಾರೆ.