ಪುಡಾ ಅಧ್ಯಕ್ಷರಾಗಿ ಅಮಳ ರಾಮಚಂದ್ರ ಆಯ್ಕೆ
ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಅಮಳ ರಾಮಚಂದ್ರ ಆಯ್ಕೆಯಾಗಿದ್ದಾರೆ.

ಕಳೆದ ಎಂಟು ತಿಂಗಳಿನಿಂದ ಖಾಲಿಯಿರುವ ಪುಡಾ ಅಧ್ಯಕ್ಷ ಸ್ಥಾನಕ್ಕೆ ನಗರ ಸಭೆ ಮಾಜಿ ಸದಸ್ಯ ಮುಹಮ್ಮದ್ ಆಲಿ ಸಹಿತ ಕೆಲವರ ಹೆಸರು ಕೇಳಿ ಬಂದಿತ್ತಾದರೂ ಅಂತಿಮವಾಗಿ ಕೆಪಿಸಿಸಿ ವಕ್ತಾರರೂ ಆಗಿರುವ ಅಮಳ ರಾಮಚಂದ್ರ ಅವರ ಹೆಸರೇ ಫೈನಲ್ ಆಗಿ ಆಯ್ಕೆಯಾಗಿದೆ. ನ್ಯಾಯವಾದಿಯೂ ಆಗಿರುವ ಭಾಸ್ಕರ ಕೋಡಿಂಬಾಳ ಅವರು ಪುಡಾ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಆದರೆ ಅವರು ಅಧ್ಯಕ್ಷರಾದ ಕೆಲವೇ ತಿಂಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.