ಯುಟ್ಯೂಬ್ ವೀಡಿಯೋ ನಂಬಿ ಡಯಟ್, ಪ್ರಾಣ ಕಳೆದುಕೊಂಡ ಯುವತಿ
ತೂಕ ಇಳಿಸಿಕೊಳ್ಳಲು ಸೋಶಿಯಲ್ ಮೀಡಿಯಾ ಫಾಲೋ ಮಾಡುತ್ತಿದ್ದ ಪ್ರಥಮ ವರ್ಷದ ಪದವಿಪೂರ್ವ ವಿದ್ಯಾರ್ಥಿ ಎಂ. ಶ್ರೀನಂದಾ ಮೃತಪಟ್ಟಿದ್ದಾರೆ. ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.

ತೂಕ ಇಳಿಸಿಕೊಳ್ಳಲು ಶ್ರೀನಂದಾ ನಿರಂತರ ಪ್ರಯತ್ನ ನಡೆಸುತ್ತಿದ್ದರು. ತನ್ನ ತೂಕ ಹೆಚ್ಚಾಗಬಹುದು ಎನ್ನುವ ಕಾರಣಕ್ಕೆ 18ರ ಶ್ರೀನಂದಾ ಊಟ ಕೂಡ ಬಿಟ್ಟಿದ್ದರು. ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನಡೆಯುತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಶ್ರೀನಂದಾ ಸಾವನ್ನಪ್ಪಿದ್ದಾರೆ.
ಶ್ರೀನಂದಾಗೆ ತೂಕ ಹೆಚ್ಚಾಗುವ ಭಯ ಇತ್ತು. ಯುಟ್ಯೂಬ್ ವಿಡಿಯೋವನ್ನು ಫಾಲೋ ಮಾಡಿ, ಡಯಟ್ ಮಾಡುತ್ತಿದ್ದರು. ಅಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ವ್ಯಾಯಾಮ ಮಾಡುತ್ತಿದ್ದರು. ತೂಕ ಹೆಚ್ಚಾಗುವ ಭಯದಲ್ಲಿ ಘನ ಆಹಾರವನ್ನು ಬಿಟ್ಟಿದ್ದರು. ಲಿಕ್ವಿಡ್ ಆಹಾರವನ್ನು ಮಾತ್ರ ಸೇವನೆ ಮಾಡುತ್ತಿದ್ದ ಶ್ರೀನಂದಾ, ಹಸಿವಿನಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.