ಕರಾವಳಿ

ರಾಷ್ಟ್ರೀಯ ಸಿಎಸ್‌ಸಿ  ಹಿಂದಿ ಒಲಿಂಪಿಯಾಡ್ ಪರೀಕ್ಷೆ:
ಸೃಜನ್ ಕೆ.ಪಿ ಪಲ್ಲತ್ತಾರು ರಾಜ್ಯ ಮಟ್ಟದ ಪ್ರಥಮ ರ್‍ಯಾಂಕ್


ಪುತ್ತೂರು:  ರಾಷ್ಟ್ರೀಯ ಸಿಎಸ್‌ಸಿ ಅಕಾಡೆಮಿ ಒಲಿಂಪಿಯಾಡ್ ನಡೆಸುವ 2024-25ನೇ ಸಿಎಸ್‌ಸಿ ಹಿಂದಿ ಒಲಿಂಪಿಯಾಡ್ ಪರೀಕ್ಷೆಯಲ್ಲಿ ಒಳಮೊಗ್ರು ಗ್ರಾಮದ ಪಲ್ಲತ್ತಾರು ನಿವಾಸಿ ಸೃಜನ್ ಕೆ.ಪಿ.ರವರು ರಾಜ್ಯ ಮಟ್ಟದಲ್ಲಿ ಪ್ರಥಮ ರ್‍ಯಾಂಕ್ ಪಡೆದುಕೊಂಡಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಆನ್‌ಲೈನ್ ಮೂಲಕವೇ ಈ ಪರೀಕ್ಷೆ ನಡೆಯುತ್ತಿದ್ದು ಇದರಲ್ಲಿ ರಾಜ್ಯದಿಂದ ಇಬ್ಬರು ಪ್ರಥಮ ರ್‍ಯಾಂಕ್ ಪಡೆದುಕೊಂಡಿದ್ದು ಅದರಲ್ಲಿ ದ.ಕ ಜಿಲ್ಲೆಯಿಂದ ಸೃಜನ್ ಕೆ.ಪಿ.ಯರವರು ಓರ್ವರಾಗಿದ್ದಾರೆ. ಶೈಕ್ಷಣಿಕ ಕಾರ್ಯಕ್ಷಮತೆ ಸುಧಾರಿಸಲು ಜ್ಞಾನದ ಮಟ್ಟ ಮತ್ತು ಪರೀಕ್ಷೆಯ ಸಿದ್ಧತೆಯನ್ನು ಅಳೆಯಲು ಈ ಒಲಿಂಪಿಯಡ್ ಪರೀಕ್ಷೆ ಸಹಾಯಮಾಡುತ್ತದೆ. ರಾಷ್ಟ್ರೀಯ ರಾಜ್ಯಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಸೇರಿದಂತೆ ಸ್ಕಾಲರ್ ಶಿಪ್  ಕೂಡ ಇದರಲ್ಲಿದೆ.


ಸೃಜನ್ ಕೆ.ಪಿ ಇವರು ತೆಂಕಿಲ ನರೇಂದ್ರ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದು, ಕಾಲೇಜ್ ವಿದ್ಯಾರ್ಥಿ ಸಂಘದ ನಾಯಕರೂ ಆಗಿದ್ದಾರೆ. ಇವರು ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮತ್ತು ಉದ್ಯಮಿ ಪ್ರವೀಣ್ ಪಲ್ಲತ್ತಾರುರವರ ಪುತ್ರ.

Leave a Reply

Your email address will not be published. Required fields are marked *

error: Content is protected !!