ಬರೋಬ್ಬರಿ 100 ಬೈಕ್ ಕಳ್ಳತನ ಮಾಡಿದ ಕಳ್ಳನನ್ನು ಬಂಧಿಸಿದ ಪೊಲೀಸರು
ಬರೋಬ್ಬರಿ 100 ಬೈಕ್ ಕಳ್ಳತನ ಮಾಡಿರುವ ಖತರ್ನಾಕ್ ಕಳ್ಳನನ್ನು ಕೆ.ಆರ್ ಪುರ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಬಂಗಾರುಪಾಳ್ಯಂ ನಿವಾಸಿ ಪ್ರಸಾದ್ ಬಾಬು ಬಂಧಿತ ಕಳ್ಳ. ದುಬಾರಿ ಬೆಲೆಯ ಬೈಕ್‌ಗಳನ್ನೇ ಟಾರ್ಗೆಟ್ ಮಾಡ್ತಿದ್ದ ಪ್ರಸಾದ್ ಬಾಬು, ಪ್ರತಿ ದಿನ ಸಂಜೆ ಬಸ್‌ನಲ್ಲಿ ಬೆಂಗಳೂರಿಗೆ ಬರುತ್ತಿದ್ದ. ನಂತರ ಕೆಆರ್ ಪುರ, ಟಿನ್ ಫ್ಯಾಕ್ಟರಿ, ಮಹದೇವಪುರ ಜನವಸತಿ ಪ್ರದೇಶಗಳಲ್ಲಿ ಓಡಾಟ ನಡೆಸಿ, ಮನೆ ಮುಂದೆ ನಿಲ್ಲಿಸಿದ ಬೈಕ್‌ಗಳ ಹ್ಯಾಂಡ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದ.
3 ವರ್ಷದಲ್ಲಿ 100 ಬೈಕ್ ಗಳನ್ನು ಈತ ಕದ್ದಿದ್ದ. ಬಂದ ದಿನವೇ ಬೈಕ್ ಕದ್ದು, ಅದೇ ಬೈಕ್‌ನಲ್ಲಿ ಊರಿಗೆ ಎಸ್ಕೇಪ್ ಆಗುತ್ತಿದ್ದ. ಬೆಂಗಳೂರು, ತಿರುಪತಿ, ಚಿತ್ತೂರು ಸೇರಿ ಹಲವೆಡೆ ಕಳ್ಳತನ ಮಾಡುತ್ತಿದ್ದ.
ಪ್ರಸಾದ್ ಬಾಬು ಕದ್ದ ಬೈಕ್‌ಗಳನ್ನ 15-20 ಸಾವಿರಕ್ಕೆ ಆಂಧ್ರದಲ್ಲಿ ಮಾರಾಟ ಮಾಡಿ, ಬಂದ ಹಣದಲ್ಲಿ ಮಜಾ ಮಾಡುತ್ತಿದ್ದ ಎನ್ನಲಾಗಿದೆ. ಆರೋಪಿಯಿಂದ 20 ರಾಯಲ್ ಎನ್‌ಫೀಲ್ಡ್ ಬೈಕ್, 30 ಫಲ್ಸರ್ ಬೈಕ್, 40 ಆಕ್ಟಿವಾ ಹಾಗೂ ಇತರೆ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.