ಪುತ್ತೂರು: ಹಲವರ ಮೇಲೆ ಹೆಜ್ಜೇನು ದಾಳಿ, ರಿಕ್ಷಾ ಚಾಲಕ ಆಸ್ಪತ್ರೆಗೆ ದಾಖಲು
ಪುತ್ತೂರು: ಎಪಿಎಂಸಿ ರಸ್ತೆಯ ಬಳಿಯ ಆಟೋ ರಿಕ್ಷಾ ಸರ್ವಿಸ್ ಶೋರೂಮ್ ಮತ್ತು ಆದರ್ಶ ಆಸ್ಪತ್ರೆಯ ಬಳಿ ಹೆಜ್ಜೇನು ಹಲವರ ಮೇಲೆ ದಾಳಿ ನಡೆಸಿದ ಘಟನೆ ಫೆ.27ರಂದು ನಡೆದಿದೆ.

ಹೆಜ್ಜೇನಿನ ದಾಳಿಗೆ ತುತ್ತಾದ ರಿಕ್ಷಾ ಚಾಲಕ ಭಕ್ತಕೋಡಿಯ ಪ್ರಕಾಶ್ ಎಂಬವರು ತೀವ್ರ ಅಸ್ವಸ್ಥಗೊಂಡಿದ್ದು ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇತರ ಸಾರ್ವಜನಿಕರ ಮೇಲೂ ಹೆಜ್ಜೇನು ದಾಳಿ ನಡೆಸಿದ್ದು ಅವರು ಅಲ್ಪ ಸ್ವಲ್ಪ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ