ಕರಾವಳಿ

ಅರಂತೋಡು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಜಿ ಮಹಮ್ಮದ್ ಕುಕ್ಕುವಳ್ಳಿಯವರಿಗೆ ಸನ್ಮಾನ


ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಸಮಾಜ ಸೇವಕರು, ಉದ್ಯಮಿಗಳು ಹಾಗೂ ಸೂರು ಇಲ್ಲದವರಿಗೆ ಸೂರು ನಿರ್ಮಾಣದ ರೂವಾರಿ ಮಹಮ್ಮದ್ ಕುಕ್ಕುವಳ್ಳಿ ಅವರು ಇಂದು ಅರಂತೋಡಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರನ್ನು ಅರಂತೋಡು ಜುಮಾ ಮಸೀದಿ ಅಧ್ಯಕ್ಷರಾದ ಅಶ್ರಫ್ ಗುಂಡಿ ಹಾಗೂ ಎಸ್.ಕೆ.ಎಸ್.ಎಸ್.ಎಫ್ ನ ವಿಖಾಯತಂಡದ ಸದಸ್ಯ ತಾಜುದ್ಧೀನ್ ಅರಂತೋಡು ಶಾಲು ಹೊದಿಸಿ, ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿದರು.

ಪೆರಾಜೆ ಅಲ್ ಅಮೀನ್ ಚಾರಿಚೇಬಲ್ ಟ್ರಸ್ಟ್ ನ ಅಧ್ಯಕ್ಷ ಉನೈಸ್ ಪೆರಾಜೆ, ಅಶ್ರಫ್ ಕುಂಬ್ರ, ಮಜೀದ್ ಭಾಗಮಂಡಲ, ಹನೀಫ್ ಮೊಟ್ಟೆಂಗಾರ್ ಮೊದಲಾದವರು ಉಪಸ್ಥಿತರಿದ್ದರು.

ಈ ಸಂಧರ್ಭದಲ್ಲಿ ಮಾತನಾಡಿದ ಮಹಮ್ಮದ್ ಕುಕ್ಕುವಳ್ಳಿ, ತಾಜುದ್ಧೀನ್ ಅರಂತೋಡು ವಿಖಾಯ ತಂಡದ ಸದಸ್ಯನಾಗಿ ಈ ಭಾಗದಲ್ಲಿ ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ ಮತ್ತು 2018ರ ಜೋಡುಪಾಲ ನೆರೆ ಸಂಧರ್ಭದಲ್ಲಿನ ಸೇವೆಯನ್ನು ಸ್ಮರಿಸಿದರು. ಅಲ್ಲದೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಆಪತ್ಭಾಂದವ ಪ್ರಶಸ್ತಿ ನೀಡಿ ಗೌರವಿಸಿದನ್ನು ಅವರು ನೆನಪಿಸಿಕೊಂಡರು.

Leave a Reply

Your email address will not be published. Required fields are marked *

error: Content is protected !!