ಪುತ್ತೂರು ಪೇಟೆಯಲ್ಲಿ ಪೈಪ್ ನೊಳಗೆ ಸಿಲುಕಿಕೊಂಡ ಮಹಿಳೆಯ ಕಾಲು
ಪುತ್ತೂರು: ಇಲ್ಲಿನ ಪೇಟೆಯ ಪಕ್ಕದಲ್ಲೇ ಕಾಲನಿಗೆ ಹೋಗುವ ರಸ್ತೆಯಲ್ಲಿ ಇರುವ ಪೈಪ್ ನೊಳಗಡೆ ಮಹಿಳೆಯೋರ್ವರ ಕಾಲು ಸಿಲುಕಿ ತೊಂದರೆಗೊಳಗಾದ ಘಟನೆ ಘಟನೆ ಡಿ.30ರಂದು ನಡೆದಿದೆ.
ಮುಖ್ಯರಸ್ತೆಯಿಂದ ಕಾಲನಿ ರಸ್ತೆಗೆ ತಿರುಗುವ ಪ್ರದೇಶದಲ್ಲಿ ಚರಂಡಿಗೆ ಪೈಪ್ ಲೈನ್ ಹಾಕಲಾಗಿದೆ. ಈ ಪೈಪ್ ಲೈನ್ ತುಂಡಾಗಿದ್ದು ಅದಕ್ಕೆ ಮಹಿಳೆಯ ಕಾಲು ಸಿಲುಕಿತ್ತು. ಸ್ಥಳೀಯರು ತಕ್ಷಣವೇ ಮಹಿಳೆಯ ಸಹಾಯಕ್ಕೆ ಧಾವಿಸಿ ಅಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪೈಪ್ ತುಂಡಾಗಿದ್ದರೂ ಸಂಬಂಧಪಟ್ಟವರು ಸರಿಪಡಿಸುವ ಗೋಜಿಗೆ ಹೋಗದೆ ಇರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.