ವಿಮೆನ್ ಇಂಡಿಯಾ ಮೂವ್ಮೆಂಟ್ ಉಪ್ಪಿನಂಗಡಿ ಬ್ಲಾಕ್ ನೂತನ ಸಮಿತಿ ಅಸ್ತಿತ್ವಕ್ಕೆ
ಪುತ್ತೂರು: ವಿಮೆನ್ ಇಂಡಿಯಾ ಮೂವ್ಮೆಂಟ್ ಉಪ್ಪಿನಂಗಡಿ ಬ್ಲಾಕ್ ಸಮಿತಿಯನ್ನು ಅ.22ರಂದು ರಚಿಸಲಾಯಿತು.

ವಿಮ್ ನೂತನ ಬ್ಲಾಕ್ ಸಮಿತಿ ರಚನೆ ಪಕ್ರಿಯೆಯನ್ನು ಪುತ್ತೂರು ತಾಲೂಕು ಅಧ್ಯಕ್ಷೆ ಝಹಿದ ಸಾಗರ್ ನಡೆಸಿಕೊಟ್ಟರು. ಅಧ್ಯಕ್ಷೆಯಾಗಿ ನಫೀಸ ಮಠ, ಉಪಾಧ್ಯಕ್ಷೆಯಾಗಿ ನಸೀಮ ಕೆ ಎಂ, ಕಾರ್ಯದರ್ಶಿಯಾಗಿ ಮೆಹರು ಆತೂರ್, ಜೊತೆಕಾರ್ಯದರ್ಶಿಯಾಗಿ ಮುಮ್ತಾಜ್, ಕೋಶಾಧಿಕಾರಿಯಾಗಿ ಅಸ್ಮಾ ಆಯ್ಕೆಯಾದರು.
ಸದಸ್ಯರುಗಳಾಗಿ ನಫೀಸ ಸುಹೈಬ್, ಸಾಜಿದ, ಸಫಿಯ ಕೊಯಿಲ, ಸಫ್ರಿನ ಉಪ್ಪಿನಂಗಡಿ, ಸಬ್ರೀನ ನೆಕ್ಕಿಲಾಡಿ,
ನಿಶಾ ನೌಶಾದ್, ಮರಿಯಮ್ಮಾ, ಸಂಶಿನ, ಶಾಹಿದ ಆಯ್ಕೆಯಾದರು. ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕಿನ ಉಪಾಧ್ಯಕ್ಷೆ ಝರೀನಾ, ಕಾರ್ಯದರ್ಶಿ ಸೌದ ಮಠ, ಜೊತೆ ಕಾರ್ಯದರ್ಶಿ ಫಾತಿಮಾ ನಿರ್ಮ, ಸದಸ್ಯರುಗಳಾದ ನುಶ್ರತ್, ಫೌಝಿಯ ಉಪಸ್ಥಿತರಿದ್ದರು.