ಕರಾವಳಿ

ಅಶೋಕ ಜನಮನ: ಅ.21ರಂದು ಚಪ್ಪರ ಮುಹೂರ್ತ





ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಮುಂದಾಳತ್ವದಲ್ಲಿ “ರೈ ಎಸ್ಟೇಟ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಪುತ್ತೂರು” ಇದರ ವತಿಯಿಂದ ದೀಪಾವಳಿಯ ಪ್ರಯುಕ್ತ ನ.2ರಂದು ಪುತ್ತೂರು-ಕೊಂಬೆಟ್ಟು ತಾಲೂಕು ಕ್ರಿಡಾಂಗಣದಲ್ಲಿ ನಡೆಯಲಿರುವ ವಸ್ತ್ರ ವಿತರಣೆ ಮತ್ತು ಟ್ರಸ್ಟ್ ನ ಫಲಾನುಭವಿಗಳ ವಾರ್ಷಿಕ ಸಮಾವೇಶ “ಅಶೋಕ ಜನ-ಮನ 2024” ಕಾರ್ಯಕ್ರಮದ ಚಪ್ಪರ ಮುಹೂರ್ತ  ಅ. 21 ಸೋಮವಾರ ಬೆಳಿಗ್ಗೆ ಗಂಟೆ 8:47 ಕ್ಕೆ ಸರಿಯಾಗಿ ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆಯಲಿದೆ.

ಸುದೇಶ್ ಶೆಟ್ಟಿ


ಈ ಶುಭ ಸಂಧರ್ಭದಲ್ಲಿ ಟ್ರಸ್ಟ್ ನ ಎಲ್ಲಾ ಸದಸ್ಯರುಗಳು ಮತ್ತು ಟ್ರಸ್ಟ್ ನ ಸರ್ವ ಧರ್ಮೀಯ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು,ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕು. ಜವಾಬ್ದಾರಿಯುತ ಕಾರ್ಯಕ್ರಮದ ಎಲ್ಲಾ ಉಪ ಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರು ಕಡ್ಡಾಯವಾಗಿ ಭಾಗವಹಿಸುವಂತೆ  ರೈ ಎಸ್ಟೇಟ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ನ ಕಾರ್ಯಾಧ್ಯಕ್ಷರಾದ ಸುದೇಶ್.ಆರ್.ಶೆಟ್ಟಿ ಶಾಂತಿನಗರ ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!