ಸುಳ್ಯ: ಆನೆಗುಂಡಿಯಲ್ಲಿ ರಸ್ತೆಗುರುಳಿದ ಮರ, ಸಂಪರ್ಕ ಕಡಿತ
ಸುಳ್ಯ: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಆನೆಗುಂಡಿ ಬಳಿ ಅಕ್ಟೋಬರ್ 5ರಂದು ಸಂಜೆ ಬೃಹತ್ ಗಾತ್ರದ ಮರ ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ.
ಸುಳ್ಯ 33ಕೆ.ವಿ. ವಿದ್ಯುತ್ ಲೈನ್ ಕಂಬಕ್ಕೆ ಹಾನಿಯಾಗಿದ್ದು ಸಂಪರ್ಕ ಕಡಿತಗೊಂಡಿದೆ. ಸುಳ್ಯಕ್ಕೆ ವಿದ್ಯುತ್ ಸಂಪರ್ಕ ವಿಳಂಬವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಪುತ್ತೂರು ಕಡೆಯಿಂದ ಸುಳ್ಯ ಕಡೆಗೆ ತೆರಳುವ ವಾಹನಗಳು ಕುಂಬ್ರ ಬೆಳ್ಳಾರೆ ರಸ್ತೆಯಾಗಿ ಸುಳ್ಯಕ್ಕೆ ಸಂಚರಿಸುತ್ತಿದ್ದು ಸುಳ್ಯದಿಂದ ಪುತ್ತೂರು ಕಡೆಗೆ ತೆರಳುವ ವಾಹನಗಳು ಪೈಚಾರ್ ಬೆಳ್ಳಾರೆ ಕುಂಬ್ರ ರಸ್ತೆಯಾಗಿ ಸಂಚರಿಸುತ್ತಿದೆ.