ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ
ಪುತ್ತೂರು: ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಸಂಭ್ರಮದ ಸ್ವಾತಂತ್ರ್ಯ ಮಹೋತ್ಸವ ನಡೆಯಿತು.
ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಎಂ ಎಚ್ ಕೆ ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಫಾರೂಕ್ ಹಾಜಿ ಕನ್ಯಾನ ದ್ವಜಾರೋಹಣ ನೆರವೇರಿಸಿದರು.
ಶೈಕ್ಷಣಿಕ ಚಿಂತಕ ಅಮ್ಜದ್ ಖಾನ್ ಪೋಳ್ಯ, ಎಂ ಎಚ್ ಕೆ ಸೌದಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನೌಶಾದ್ ಪೋಳ್ಯ, ಎಂ ಎಚ್ ಕೆ ಸೌದಿ ಆರ್ಗನೈಸರ್ ರಶೀದ್ ಸಖಾಫಿ ಮಿತ್ತೂರು, ಮರ್ಕಝುಲ್ ಹುದಾ ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ ಸಾಂದರ್ಭಿಕವಾಗಿ ಮಾತನಾಡಿದರು. ಡಿಗ್ರಿ ಶರೀಅತ್ ಮುದರ್ರಿಸ್ ಸ್ವಾಲಿಹ್ ಹನೀಫಿ ಪ್ರಾರ್ಥನೆ ನೆರವೇರಿಸಿದರು.
ಕುಂಬ್ರ ಮರ್ಕಝ್ ಆಡಳಿತ ಸಮಿತಿ ಸದಸ್ಯರಾದ ಯೂಸುಫ್ ಹಾಜಿ ಕೈಕಾರ, ಆಶಿಕುದ್ದೀನ್ ಅಖ್ತರ್,
ಶರೀಅತ್ ವಿಭಾಗದ ಮುದರ್ರಿಸ್ ಜಲೀಲ್ ಸಖಾಫಿ, ಹನೀಫ್ ಕಾಮಿಲ್ ಸಖಾಫಿ ಮುಂತಾದವರು ಉಪಸ್ಥಿತರಿದ್ದರು. ಪದವಿಪೂರ್ವ ವಿಭಾಗದ ಪ್ರಾಂಶುಪಾಲೆ ಸಂಧ್ಯಾ ಪಿ ಕಾರ್ಯಕ್ರಮ ನಿರ್ವಹಿಸಿದರು. ಪದವಿ ವಿಭಾಗ, ಪದವಿಪೂರ್ವ ವಿಭಾಗ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು. ಬಳಿಕ ವಿದ್ಯಾರ್ಥಿನಿಯರಿಗೆ ವಿವಿಧ ಕಾರ್ಯಕ್ರಮ ನಡೆಯಿತು.