ಟ್ರಂಪ್ ಮೇಲೆ ಗುಂಡಿನ ದಾಳಿ ನಡೆಸಿದ್ದು 20 ವರ್ಷದ ಯುವಕ..!
ಅಮೆರಿಕದಲ್ಲಿ ಜು.13ರಂದು ನಡೆದ ಚುನಾವಣಾ ರ‍್ಯಾಲಿಯಲ್ಲಿ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡು ಹಾರಿಸಿದ್ದ ವ್ಯಕ್ತಿಯನ್ನು ಎಫ್‌ಬಿಐ ಪತ್ತೆ ಹಚ್ಚಿದ್ದು, ಆತನಿಗೆ ಕೇವಲ 20 ವರ್ಷ ಎಂದು ತಿಳಿದು ಬಂದಿದೆ.

ಪಶ್ಚಿಮ ಪೆನ್ಸಿಲ್ವೇನಿಯಾದಲ್ಲಿ ಈ 20 ವರ್ಷದ ಯುವಕ ಮಾಜಿ ಅಧ್ಯಕ್ಷ ಟ್ರಂಪ್ ರನ್ನು 100 ಮೀಟರ್ ದೂರದಿಂದ ಗುರಿಯಾಗಿಸಿಕೊಂಡು, ಗುಂಡು ಹಾರಿಸಿದ್ದಾನೆ. ಗುಂಡಿನ ದಾಳಿಯಿದ ಕೂಡಲೇ ವೇದಿಕೆ ಬಳಿಯಿದ್ದ ಭದ್ರತಾ ಸಿಬ್ಬಂದಿ ಟ್ರಂಪ್ ನೆರವಿಗೆ ಧಾವಿಸಿ ರಕ್ಷಣೆ ಮಾಡಿದ್ದು ಡೊನಾಲ್ಡ್ ಟ್ರಂಪ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.