ಈಡನ್ ಗ್ಲೋಬಲ್ ಶಾಲಾ ಕ್ಯಾಬಿನೆಟ್ ಚುನಾವಣೆ
ಪುತ್ತೂರು: ಬೆಳಂದೂರು ಈಡನ್ ಗ್ಲೋಬಲ್ ಶಾಲೆಯಲ್ಲಿ ಚುನಾವಣೆಯ ಅರಿವು ಮೂಡಿಸುವ ಉದ್ದೇಶದಿಂದ 2024-25ನೇ ಶೈಕ್ಷಣಿಕ ವರ್ಷದ ಶಾಲಾ ಪದಾಧಿಕಾರಿಗಳನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು.

ಅಭ್ಯರ್ಥಿಗಳು ವಿವಿಧ ಸ್ಥಾನಗಳಿಗೆ ಶಾಲಾ ಚುನಾವಣಾ ಆಯುಕ್ತರಾದ ಶ್ರೀಮತಿ ಪವಿತ್ರ ಇವರಿಗೆ ನಾಮಪತ್ರ ಸಲ್ಲಿಸಿ ಬಿರುಸಿನ ಪ್ರಚಾರ ನಡೆಸಿದರು. ಬ್ಯಾಲಟ್ ಪೇಪರಿನ ಮುಖಾಂತರ ಬುಧವಾರ ಮತದಾನ ನಡೆಯಿತು. ಶುಕ್ರವಾರದಂದು ಮತ ಎಣಿಕೆ ನಡೆಸಿ ಶಾಲಾ ಪ್ರಾಂಶುಪಾಲರಾದ ರಂಝೀ ಮುಹಮ್ಮದ್ ಚುನಾವಣಾ ಫಲಿತಾಂಶ ಪ್ರಕಟಿಸಿ ಮಕ್ಕಳಿಗೆ ಶುಭ ಹಾರೈಸಿದರು.
ಶಾಲಾ ನಾಯಕನಾಗಿ ಮುಹಮ್ಮದ್ ಸುಹಾನ್, ಶಾಲಾ ನಾಯಕಿಯಾಗಿ ರಿಫಾ ಫಾತಿಮಾ, ಶಾಲಾ ಉಪನಾಯಕರಾಗಿ ನಿಶಾನುಲ್ ಹನೀಫ್, ಉಪನಾಯಕಿಯಾಗಿ ಶಝಾ ಫಾತಿಮಾ, ಶಾಲಾ ಆರೋಗ್ಯ ಮತ್ತು ಶಿಸ್ತಿನ ನಾಯಕನಾಗಿ ಅಬೂಬಕ್ಕರ್ ಶಾರಿಕ್ ಮತ್ತು ನಾಯಕಿಯಾಗಿ ಫಾತಿಮತ್ ಶಹನಾಝ್, ಶಾಲೆಯ ಸಾಂಸ್ಕೃತಿಕ ನಾಯಕನಾಗಿ ಮುಹಮ್ಮದ್ ಅಫ್ರಾಝ್ ಮತ್ತು ನಾಯಕಿಯಾಗಿ ಶಫ್ನಾಝ್, ಶಾಲಾ ಕ್ರೀಡಾ ನಾಯಕನಾಗಿ ಇಹ್ಸಾನ್ ಬಿನ್ ಇಬ್ರಾಹಿಂ ಹಾಗೂ ನಾಯಕಿಯಾಗಿ ನಾಝಿಮ ಆಯ್ಕೆಯಾದರು. ಈ ಸಂದರ್ಭದಲ್ಲಿ ಶಾಲಾ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯೋಗದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.