ಕರಾವಳಿಕ್ರೈಂಜಿಲ್ಲೆ

ನಾಯಿ ಅಡ್ಡ ಬಂದು ಬೈಕ್‌ ಪಲ್ಟಿ: ನವ ವಿವಾಹಿತೆ ದಾರುಣ ಸಾವು



ನಾಯಿಯೊಂದು ಬೈಕ್‌ಗೆ ಅಡ್ಡ ಬಂದ ಪರಿಣಾಮ ಬೈಕ್‌ ಪಲ್ಟಿಯಾಗಿ ನವವಿವಾಹಿತೆ ದಾರುಣವಾಗಿ ಸಾವಿಗೀಡಾದ ಘಟನೆ ಹೊಸ್ಮಾರು ಬಳಿ ಸಂಭವಿಸಿದೆ. ಈದು ಗ್ರಾಮದ ಕರೆಂಬ್ಯಾಲುವಿನ ವಿಶಾಲ್‌ ಅವರ ಪತ್ನಿ ನೀಕ್ಷಾ (26ವ) ಮೃತಪಟ್ಟ ಮಹಿಳೆ.

ಕಾರ್ಕಳ ಗುರುವಾಯನಕೆರೆ ರಸ್ತೆಯ ಹೊಸ್ಮಾರು ಸೇತುವೆ ಬಳಿ ಜೂ. 28ರ ಸಂಜೆ ಗಂಡನೊಂದಿಗೆ ಬೈಕ್‌ನಲ್ಲಿ ಸಾಗುತ್ತಿದ್ದಾಗ ನಾಯಿ ಅಡ್ಡ ಬಂದಿದ್ದು, ಪರಿಣಾಮ ಬೈಕ್‌ ರಸ್ತೆಗೆಸೆಯಲ್ಪಟ್ಟಿತ್ತು. ಘಟನೆಯಿಂದ ಸಹಸವಾರೆ ನೀಕ್ಷಾ ಅವರಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಆಸ್ಪತ್ರೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದರು. ಮೃತದೇಹ ಕಾರ್ಕಳ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿದೆ. ನೀಕ್ಷಾ ಅವರಿಗೆ ಎರಡು ತಿಂಗಳ ಹಿಂದೆಯಷ್ಟೇ ಮದುವೆ ಆಗಿತ್ತು ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!