ದೇಶದ ಅತಿ ಕಿರಿಯ ಸಂಸದನೆಂಬ ಹೆಗ್ಗಳಿಕೆಗೆ ಪಾತ್ರವಾದ ಸಾಗರ್ ಖಂಡ್ರೆ
ಸಂಸತ್‌ಗೆ ಪ್ರವೇಶಿಸಲಿರುವ ಬೀದರ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ದೇಶದ ಅತಿ ಕಿರಿಯ ಸಂಸದರೆಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು ಸೋಲಿಸಿ ಇವರು ಗೆಲುವಿನ ನಗೆ ಬೀರಿದ್ದಾರೆ.
ಅರಣ್ಯ ಸಚಿವ ಈಶ್ವರ ಖಂಡ್ರೆಯವರ ಪುತ್ರರಾಗಿರುವ ಸಾಗರ್ 26 ವರ್ಷದ ಯುವಕರಾಗಿದ್ದು, ಬಿಬಿಎ- ಎಲ್‌ಎಲ್‌ಬಿ ಪದವೀಧರರಾಗಿದ್ದಾರೆ. ಮೊದಲ ಬಾರಿ ಸ್ಪರ್ಧೆಯಲ್ಲೇ ಗೆಲುವು ಸಾಧಿಸಿದ್ದಾರೆ. ಬೀದರ್ ಕ್ಷೇತ್ರದಲ್ಲಿ 2019ರ ಚುನಾವಣೆಯಲ್ಲಿ ತಮ್ಮ ತಂದೆಯನ್ನು ಸೋಲಿಸಿದ್ದ ಖೂಬಾ ವಿರುದ್ಧ ಕಳೆದ ಬಾರಿಗಿಂತ ಅಧಿಕ ಮತಗಳ ಅಂತರದಿಂದ ಸಾಗರ್ ಖಂಡ್ರೆ ಗೆದ್ದಿದ್ದಾರೆ.