ರಾಜ್ಯ

ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಕೊಲೆ ಪ್ರಕರಣ…ಎನ್ಕೌಂಟರ್ ಮಾಡುವ ಕಾನೂನು ಜಾರಿಗೆ ತರುವ ಬಗ್ಗೆ ಸರ್ಕಾರಗಳು ಯೋಚಿಸಬೇಕು: ಸಂತೋಷ್ ಲಾಡ್



ನಿನ್ನೆ ಹುಬ್ಬಳ್ಳಿಯ ಕಾಲೇಜೊಂದರಲ್ಲಿ ನಡೆದ ನೇಹಾ ಹಿರೇಮಠ ಕೊಲೆ ಪ್ರಕರಣ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಈ ಕೃತ್ಯ ಅತ್ಯಂತ ಹೀನ ಮತ್ತು ಖಂಡನೀಯ.ಇಂಥ ಘಟನೆಗಳು ಯಾವುದೇ ರಾಜ್ಯ, ದೇಶ ಮತ್ತು ಸಮುದಾಯಗಳನ್ನು ತಲೆತಗ್ಗಿಸುವಂತೆ ಮಾಡುತ್ತದೆ ಎಂದು ಹೇಳಿದರು.

ಸಂತೋಷ್ ಲಾಡ್

ವಿರೋಧ ಪಕ್ಷಗಳ ನಾಯಕರು ಪ್ರಕರಣವನ್ನು ರಾಜಕೀಯಕ್ಕೆ ತರುತ್ತಿರುವುದನ್ನು ಖಂಡಿಸಿದ ಲಾಡ್, ಇಂಥ ಪ್ರಕರಣಗಳ ಬಗ್ಗೆ ಯಾರೇ ಆಗಲಿ ಸಂವೇದನೆಹೀನರಾಗಿ ಮಾತಾಡಬಾರದು, ಇದು ರಾಜಕೀಯ ವಿಷಯವಲ್ಲ, ಹೆಣ್ಣುಮಗುವನ್ನು ಕಳೆದುಕೊಂಡಿರುವ ಕುಟುಂಬದ ಬಗ್ಗೆ ಎಲ್ಲರೂ ಯೋಚಿಸಬೇಕಿದೆ. ದುಃಖತಪ್ತ ಕುಟುಂಬದ ಸದಸ್ಯರಿಗೆ ಸಾಂತ್ವನ ನೀಡಿ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ ಎಂದು ಲಾಡ್ ಹೇಳಿದರು. ಇಂಥ ಘಟನೆಗಳು ಪುನಾರಾವರ್ತನೆ ಆಗುವುದನ್ನು ತಡೆಯಲು ತಪ್ಪಿತಸ್ಥರನ್ನು ಎನ್ಕೌಂಟರ್ ಮಾಡಿ ಸಾಯಿಸುವ ಕಾನೂನು ಜಾರಿಗೆ ತರುವುದನನ್ನು ಸರ್ಕಾರಗಳು ಯೋಚಿಸಬೇಕು ಎಂದು ಸಚಿವ ಹೇಳಿದ ಲಾಡ್ ಇದು ನನ್ನ ವೈಯಕ್ತಿಕ ಅಭಿಪ್ರಾಯವೆಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!