ರಾಜ್ಯ

ಜನಸ್ನೇಹಿ ನ್ಯಾಯಾಧೀಶ ಸೋಮಶೇಖರ್ ರವರಿಗೆ ಬಸವ ಶ್ರೀ ಪ್ರಶಸ್ತಿ ಪ್ರದಾನ



ಶ್ರೀ ಜ್ಞಾನ ಮಂದಾರ ಟ್ರಸ್ಟ್ ಬೆಂಗಳೂರು, ಶ್ರೀ ಸಾಯಿ ರಾಮನ್ ನೃತ್ಯ ಕೇಂದ್ರ ತುಮಕೂರು ಇದರ ಸಹಭಾಗಿತ್ವದಲ್ಲಿ ಕನ್ನಡ ಕಲಾ ಪ್ರತಿಭೋತ್ಸವ ಇದರ ವತಿಯಿಂದ ನೀಡಲ್ಪಡುವ ‘ಬಸವ ಶ್ರೀ’ ಪ್ರಶಸ್ತಿಯನ್ನು ಮಾನ್ಯ ಜಿಲ್ಲಾ ನ್ಯಾಯಾಧೀಶ ಎ ಸೋಮಶೇಖರ್ ರವರಿಗೆ ನೀಡಿ ಗೌರವಿಸಿ ಸನ್ಮಾನಿಸಲಾಯಿತು.


ತುಮಕೂರು ಕನ್ನಡ ಭವನದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆಯನ್ನು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ ಎಸ್ ಸಿದ್ದಲಿಂಗಪ್ಪ ವಹಿಸಿದ್ದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನಿಗಮದ ಅಧ್ಯಕ್ಷ ಡಾ.ಸೋಮಶೇಖರ್ ಸಿ ಪ್ರಶಸ್ತಿ ಪ್ರಧಾನವನ್ನು ನೆರವೇರಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನ್ಯಾಯಾಧೀಶರು ಸಮಾಜ ಸೇವೆಯ ಮೂಲಕ ದೇಶ ಸೇವೆಯನ್ನು ಮಾಡಲು ಸಾಧ್ಯ. ಸಾಧನೆಗೆ ಮೇಲು ಕೀಳು ಎಂಬ ಯಾವುದೇ ಭೇದ ಭಾವವಿರುವುದಿಲ್ಲ. ಸಾಧನೆಗೆ ಛಲ ಮುಖ್ಯ.ಜೀವನದಲ್ಲಿ ಉತ್ತಮ ಗುರಿಯನ್ನು ಹೊಂದಿದರೆ ಪ್ರತಿಯೊಬ್ಬ ನಾಗರಿಕರಿಂದಲೂ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಹೇಳಿದರು.


ವೇದಿಕೆಯಲ್ಲಿ ಚಲನಚಿತ್ರ ನಟಿ ಸಿಂಚನ ಪಿ ರಾವ್, ತುಮಕೂರು ಸಿದ್ದಗಂಗಾ ತಾಂತ್ರಿಕ ಮಹಾ ವಿದ್ಯಾಲಯದ ಸಹಪಾಧ್ಯಾಪಕರಾದ ಸಾಗರ್ ಟಿ ಎಸ್, ಚಲನಚಿತ್ರ ನಿರ್ಮಾಪಕ ಶ್ರೀನಿವಾಸ್,ಬೆಂಗಳೂರು ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ವೀಣಾ ರಮೇಶ್, ಜ್ಞಾನ ಮಂದಾರ ಟ್ರಸ್ಟ್ ಸಂಸ್ಥಾಪಕ ಸೋಮಶೇಖರ್ ಎಚ್, ಸಮಿತಿ ಪದಾಧಿಕಾರಿ ನವೀನ್ ಮಚಾದೋ ಸುಳ್ಯ, ಶ್ರೀಮತಿ ರತಿಕಾ ಹಡಗಲಿ, ವಿದುಷಿ ಹರ್ಷಿತಾ ಎನ್ ಮೊದಲಾದವರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಒಲವಿನ ಮಂದಾರ ಹಾಗೂ ಬಾಳೊಂದು ಭಾವಗೀತೆ ಕೃತಿ ಬಿಡುಗಡೆ ಗೊಳಿಸಲಾಯಿತು.
ಶ್ರೀ ಸಾಯಿ ರಾಮನ್ ನೃತ್ಯ ಕೇಂದ್ರ ವಿದ್ಯಾರ್ಥಿಗಳ ವಿವಿಧ ಸಾಂಸ್ಕೃತಿಕ ವೈಭವ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ನಡೆಯಿತು.
ಶ್ರೀಮತಿ ಸುನಿತಾ ಎಂ, ಶ್ರೀಮತಿ ನಾಗವೇಣಿ ರಘುರಾಮ್ ಕಾರ್ಯಕ್ರಮ ನಿರೂಪಿಸಿದರು.
ಈ ಕಾರ್ಯಕ್ರಮದ ವೇದಿಕೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದಿರುವ ಸಾಧಕರನ್ನು ಗುರುತಿಸಿ ಸಮಾಜ ಸೇವೆಯಲ್ಲಿ ಖ್ಯಾತಿಯನ್ನು ಪಡೆದಿರುವಂತಹ ಆಸಿಫ್ ಆಪತ್ಬಾಂಧವ ರವರಿಗೆ ಬಸವ ಶ್ರೀ ಪ್ರಶಸ್ತಿ, ಹಾಗೂ ವಿವಿಧ ಸಾಧಕರಿಗೆ ಸಮಾಜ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

Leave a Reply

Your email address will not be published. Required fields are marked *

error: Content is protected !!