ಕರಾವಳಿ

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ವತಿಯಿಂದ  ಕೋಲ್ಚಾರು ಸರ್ಕಾರಿ ಶಾಲೆಗೆ ಆಟೋಪಕರಣಗಳ ಕೊಡುಗೆ



ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಡಗು ಜಿಲ್ಲಾ ಘಟಕ ಇದರ ವತಿಯಿಂದ ದಾನಿಗಳ ಸಹಕಾರದಿಂದ ಕನ್ನಡ ಶಾಲೆ ಉಳಿಸಿ ಬೆಳೆಸಿ ಕಾರ್ಯಕ್ರಮದಡಿಯಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೀಡಲ್ಪಡುವ ಆಟೋಪಕರಣಗಳನ್ನು ಏಪ್ರಿಲ್ 3 ರಂದು ಕೋಲ್ಚಾರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಹಸ್ತಾಂತರಿಸಲಾಯಿತು.


ಉದ್ಘಾಟನೆಯನ್ನು ಸುಳ್ಯ ತಾಲೂಕು ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಐ ಮಹಮ್ಮದ್ ಇಕ್ಬಾಲ್ ಎಲಿಮಲೆ ನೆರವೇರಿಸಿದರು. ಈ ಯೋಜನೆಯನ್ನು ತರಿಸುವಲ್ಲಿ ಸಂಪೂರ್ಣ ಸಹಕರಿಸಿದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಡಗು ಜಿಲ್ಲಾ ಅಧ್ಯಕ್ಷ ಉನೈಸ್ ಪೆರಾಜೆ ಮಾತನಾಡಿ ಶುಭ ಹಾರೈಸಿದರು.

ಈ ಕೊಡುಗೆಯನ್ನು ಬೆಂಗಳೂರು ಮೂಲದ ಉದ್ಯಮಿಗಳಾದ ಅರ್ಜುನ್ ಕಲ್ಯಾಣಪುರ ಹಾಗೂ ಶ್ರೀಮತಿ ಸುನಿತಾ ಮಹೇಶ್ವರಿ ನೀಡಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಉನೈಸ್ ಪೆರಾಜೆಯವರು ಈ ಯೋಜನೆಯನ್ನು ಸರ್ಕಾರಿ ಶಾಲೆಗೆ ತರಿಸುವಲ್ಲಿ ಯಶಸ್ವಿಯಾಗಿದ್ದು ಇದರೊಂದಿಗೆ 44 ನೇಯ ಶಾಲೆಗೆ ಆಟೋಪಕರಣಗಳನ್ನು ಪೂರೈಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಚಿನ್ನಸ್ವಾಮಿ ಶೆಟ್ಟಿ, ಸಹಶಿಕ್ಷಕರಾದ ಜಲಜಾಕ್ಷಿ, ರಂಗನಾಥ, ಮನು ಕುಮಾರ್, ಮಮತಾ, ವಿನುತಾ, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!