ಕರಾವಳಿಕ್ರೈಂ

ತುಮಕೂರಿನಲ್ಲಿ ಕೊಲೆ: ಊರಿಗೆ ತಲುಪಿದ ಮೂವರ ಮೃತದೇಹ



ತುಮಕೂರಿನಲ್ಲಿ ಬೆಳ್ತಂಗಡಿಯ ಮೂವರನ್ನು ಕೊಲೆ ಮಾಡಿ ಕಾರಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎನ್‌ಎ ಪರೀಕ್ಷೆ ಬಳಿಕ ಮೂವರ ಮೃತದೇಹವನ್ನು ಮನೆಯವರಿಗೆ ಹಸ್ತಾಂತರ ಮಾಡಲಾಗಿದೆ. ಮಾ.29 ರಂದು ಶುಕ್ರವಾರ ಬೆಳಗ್ಗೆ ಮೃತದೇಹ ಮನೆಗೆ ತಲುಪಿದೆ.

ಶಾಹುಲ್ ಹಮೀದ್ ಹಾಗೂ ಇಸಾಕ್ ರವರ ಮೃತದೇಹ ಬೆಳಗಿನ ಜಾವ ಉಜಿರೆ ಮೊಯ್ಯುದ್ದಿನ್ ಜುಮಾ ಮಸೀದಿ ಹಳೆಪೇಟೆಗೆ ತಲುಪಿದೆ ಹಾಗೂ ಸಿದ್ದೀಕ್ ರವರ ಮೃತದೇಹ ಶಿರ್ಲಾಲು ಮಸೀದಿಗೆ ತಲುಪಿದೆ ಎಂದು ತಿಳಿದು ಬಂದಿದೆ. ಮೂವರನ್ನೂ ಅತ್ಯಂತ ಭೀಕರವಾಗಿ ಕೊಲೆ ಮಾಡಿ ಬಳಿಕ ಕಾರಿನಲ್ಲಿ ಹಾಕಿ ಬೆಂಕಿ ಹಚ್ಚಲಾಗಿತ್ತು. ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕೆನ್ನುವ ಆಗ್ರಹ ಕೇಳಿ ಬಂದಿದೆ.

Leave a Reply

Your email address will not be published. Required fields are marked *

error: Content is protected !!