ವೃದ್ದ ಮಾವನಿಗೆ ಮನಸೋ ಇಚ್ಚೆ ಥಳಿಸಿದ ಸೊಸೆ
ಮಂಗಳೂರು: ವೃದ್ದ ಮಾವನಿಗೆ ಸೊಸೆಯೊಬ್ಬಳು ಮನಸೋ ಇಚ್ಚೆ ಥಳಿಸಿದ ಘಟನೆ ನಗರದ ಕುಲಶೇಖರ ಬಳಿ ನಡೆದಿದ್ದು ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿ ಸೊಸೆಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಹಲ್ಲೆಯಿಂದ 87 ವರ್ಷದ ವಯೋವೃದ್ಧ ಪದ್ಮನಾಭ ಸುವರ್ಣ ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಮಹಿಳೆಯನ್ನು ಕುಲಶೇಖರದ ನಿವಾಸಿ, ಕೆಇಬಿ ಅಧಿಕಾರಿ ಉಮಾಶಂಕರಿ ಎಂದು ಗುರುತಿಸಲಾಗಿದೆ.
ಮಾ.9ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು ಉಮಾ ಶಂಕರಿಯ ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಪತಿ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದ್ದು ಉಮಾಶಂಕರಿ ಅವರು ವೃದ್ದ ಮಾವನಿಗೆ ವಾಕಿಂಗ್ ಸ್ಟಿಕ್‌ನಿಂದ ಹಲ್ಲೆ ನಡೆಸುತ್ತಾ ನಿಂದಿಸಿದ್ದು ಬಳಿಕ ಅವರನ್ನು ನೆಲಕ್ಕೆ ದೂಡಿ ಹಾಕಿದ್ದಾರೆ. ಪದ್ಮನಾಭ ಸುವರ್ಣ ಅವರ ಪುತ್ರಿ ಪ್ರಿಯಾ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಸೊಸೆ ಥಳಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಉಮಾಶಂಕರಿ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆನ್ನುವ ಆಗ್ರಹ ಕೇಳಿ ಬಂದಿದೆ.