ವಿದ್ಯುತ್ ತಂತಿ ತಗುಲಿ ಬಸ್ ಗೆ ಬೆಂಕಿ – ಐವರು ಸಜೀವ ದಹನ
ಮದುವೆ ಸಮಾರಂಭಕ್ಕೆ ತೆರಳಿ ವಾಪಸ್ಸಾಗುತ್ತಿದ್ದ ವೇಳೆ ಬಸ್‌ಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಐವರು ಮೃತಪಟ್ಟು ಹತ್ತು ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯಲ್ಲಿ ಮಾ.11ರಂದು ನಡೆದಿದೆ.
ವಿದ್ಯುತ್ ತಂತಿ ತಗುಲಿದ ವೇಳೆ ಬಸ್ಸಿಗೆ ಬೆಂಕಿ ಹೊತ್ತಿಕೊಂಡಿದ್ದು ಇಡೀ ಬಸ್ಸು ಸುಟ್ಟು ಕರಕಲಾಗಿದೆ ಈ ವೇಳೆ ಬಸ್ಸಿನಿಂದ ಹೊರಬರಲಾಗದೆ ಐವರು ಸಜೀವ ದಹನಗೊಂಡಿದ್ದರೆ ಅಲ್ಲದೆ ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.