ರಾಜ್ಯ

ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿ ಸೇರ್ಪಡೆ ವಿಚಾರ: ಕಾಂಗ್ರೆಸ್ ವಿರುದ್ಧ ಕೈ ಕಾರ್ಯಕರ್ತರ ಆಕ್ರೋಶ!?ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿ ಸೇರಿದ್ದು ಇದಕ್ಕೆ ಕಾಂಗ್ರೆಸ್ ವಿರುದ್ಧವೇ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲ ತಾಣಗಳ ಮೂಲಕ ತಮ್ಮ ಅಸಮಾಧಾನ ಹೊರ ಹಾಕುತ್ತಿರುವ ಕೈ ಕಾರ್ಯಕರ್ತರು, ಬಿಜೆಪಿಯಲ್ಲಿ ಮೂಲೆಗುಂಪು ಮಾಡಿದಾಗ ಶೆಟ್ಟರ್ ಅವರನ್ನು ಕಾಂಗ್ರೆಸ್ ಗೆ ಸೇರಿಸಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಟಿಕೆಟ್ ನೀಡಲಾಗಿತ್ತು, ಆಗ ಅವರು ಸೋತಾಗ ಅವರನ್ನು ಎಂಎಲ್ಸಿ ಮಾಡಲಾಯಿತು. ಈಗ ನೋಡಿದರೆ ಅವರು ಬಿಜೆಪಿಗೆ ವಾಪಸ್ ಹೋಗಿದ್ದಾರೆ, ಬಿಜೆಪಿಯಿಂದ ಅನ್ಯಾಯವಾಯಿತೆಂದು ಬಂದ ಶೆಟ್ಟರ್ ಗೆ ಈ ರೀತಿಯ ಸ್ಥಾನಮಾನ ಕೊಡುವುದು ಪಕ್ಷಕ್ಕೆ ಅಗತ್ಯವಿತ್ತೇ? ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ನಲ್ಲಿರುವ ನಿಷ್ಠಾವಂತರಿಗೆ ಅವಕಾಶ ಮಾಡಿಕೊಡುವ ಬದಲು ಜಗದೀಶ್ ಶೆಟ್ಟರ್ ಅಂತವರಿಗೆ ಅವಕಾಶ ನೀಡುವ ಮೂಲಕ ಪಕ್ಷ ತಪ್ಪು ಮಾಡಿದೆ. ಶೆಟ್ಟರ್ ತಮಗೆ ಬಿಜೆಪಿಯಲ್ಲಿ ಅನ್ಯಾಯ ಆಯಿತೆಂದು ತಮ್ಮ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರೇ ವಿನಃ ಅವರಿಗೆ ಕಾಂಗ್ರೆಸ್ ಮೇಲೆ ಪ್ರೀತಿ ಇರಲಿಲ್ಲ, ಅವರು ಪಕ್ಷದ ತತ್ವ ಸಿದ್ದಾಂತ ಒಪ್ಪಿ ಬಂದವರೂ ಅಲ್ಲ, ಜಾತ್ಯಾತೀತ ಕಾಂಗ್ರೆಸ್ ಗೆ ಶೆಟ್ಟರ್ ಅವರ ಅವಶ್ಯಕತೆಯಿಲ್ಲ, ಇದನ್ನು ನಮ್ಮ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಕೈ ಕಾರ್ಯಕರ್ತರು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಿಟ್ಟುಕೊಂಡಿದ್ದಾರೆ.

ಇನ್ನು ಕೆಲವರು ‘ ಚುನಾವಣೆ ಸಂದರ್ಭ ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್ ಗೆ ಸೇರಿಸಿ ಕಾಂಗ್ರೆಸ್ ಲಾಭ ಮಾಡಿಕೊಂಡಿದ್ದು ಸಿಕ್ಕಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದೆ ಎಂದು ಹೊಗಳಿಕೆಯ ಮಾತನ್ನೂ ಆಡಿದ್ದಾರೆ. ಒಟ್ಟಾರೆಯಾಗಿ ಶೆಟ್ಟರ್ ಅವರ ಬಿಜೆಪಿ ಸೇರ್ಪಡೆ ವಿಚಾರ ಬಿಸಿಬಿಸಿ ಚರ್ಚೆಗೆ ವೇದಿಕೆ ಒಡಗಿಸಿದಂತಾಗಿದೆ.

Leave a Reply

Your email address will not be published. Required fields are marked *

error: Content is protected !!