ಮಂಗಳೂರು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡ ಸವಾದ್ ಸುಳ್ಯಗೆ
ಮಲೆನಾಡು ಚಾರಿಟೇಬಲ್ ಟ್ರಸ್ಟ್ ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳಿಂದ ಅಭಿನಂದನೆ
ಸುಳ್ಯ: ಕರ್ನಾಟಕ ಸರ್ಕಾರದಿಂದ ಪ್ರತಿಷ್ಠಿತ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕಾತಿ ಹೊಂದಿದ ದ. ಕ. ಜಿಲ್ಲಾ ಎನ್.ಎಸ್. ಯು.ಐ ನಿಕಟಪೂರ್ವ ಜಿಲ್ಲಾಧ್ಯಕ್ಷ, ಕರ್ನಾಟಕ ಎನ್. ಎಸ್. ಯು. ಐ ರಾಜ್ಯ ಪ್ರ.ಕಾರ್ಯದರ್ಶಿ ಸವಾದ್ ಸುಳ್ಯರವರನ್ನು ಅವರ ಹುಟ್ಟೂರಾದ ಸುಳ್ಯದಲ್ಲಿ ಮಲೆನಾಡು ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಗುರುಂಪು “ಅಹಲನ್” ನಿವಾಸದ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಎ. ಪಿ. ಎಂ. ಸಿ. ಮಾಜಿ ಸದಸ್ಯ ಆದಂ ಹಾಜಿ ಕಮ್ಮಾಡಿ ವಹಿಸಿದ್ದರು. ಇಂಡಿಯನ್ ರೆಡ್ ಕ್ರಾಸ್ ಸುಳ್ಯ ತಾಲೂಕು ಘಟಕದ ಉಪ ಸಭಾಪತಿ ಕೆ. ಎಂ ಮುಸ್ತಫ ಅಭಿನಂದನಾ ಭಾಷಣ ಮಾಡಿದರು.
ಮುಖ್ಯಅತಿಥಿಗಳಾಗಿ ಅನ್ಸಾರಿಯಾ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಹಾಜಿ ಕೆ. ಎಂ. ಅಬ್ದುಲ್ ಮಜೀದ್, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಜನತಾ,ಉದ್ಯಮಿ ಹಾಜಿ ಕೆ. ಎಂ ಉಮ್ಮರ್ ಮೆಟ್ರೋ, ನಗರ ಪಂಚಾಯತ್ ಸದಸ್ಯರುಗಳಾದ ಶರೀಫ್ ಕಂಠಿ, ರಿಯಾಜ್ ಕಟ್ಟೆಕ್ಕಾರ್ಸ್,
ಗ್ರೀನ್ ವ್ಯೂ ಶಾಲೆಯ ಸಂಚಾಲಕ ಹಾಜಿ ಎಸ್. ಎಂ. ಅಬ್ದುಲ್ ಹಮೀದ್, ಸುಳ್ಯ ನಗರ PWD ಗುತ್ತಿಗೆದಾರರ ಅಧ್ಯಕ್ಷ ಎಂ. ಕೆ. ಅಬ್ದುಲ್ ಲತೀಫ್, ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಖಜಾoಚಿ ಕೆ. ಬಿ. ಇಬ್ರಾಹಿಂ, ತಮಿಳ್ ತೊಯಿಲಾಳಿ ಸಂಘದ ಪದಾಧಿಕಾರಿಗಳಾದ ಗಣೇಶ್ ಕೆಎಫ್ ಡಿಸಿ, ಕುಮಾರ್ ಕೆಎಫ್ ಡಿ ಸಿ,ನಾವೂರು ಬೂತ್ ಅಧ್ಯಕ್ಷ ಹನೀಫ್ ಕುಂಡಿಲ್,ರಿಜ್ವಾನ್ ಜನತಾ, ಶಹೀದ್ ಪಾರೆ, ಶಿಹಾಬ್ ವೆಜ್, ಮನ್ಸೂರ್ ಮೆಟ್ರೋ,ರಹೀಮ್ ಜನತಾ ಆಗ್ರೋ, ಸಫ್ವಾನ್ ಕಟ್ಟೆಕ್ಕಾರ್ಸ್, ಸಾಲಿ ಕಟ್ಟೆಕ್ಕಾರ್ಸ್, ಹಸನ್ ಕೇರ್ಪಳ, ಶಿಹಾಬ್ ಕೇರ್ಪಳ, ಶಾಝಿಲ್ ಕುಂಬ್ಳೆಕ್ಕಾರ್ಸ್ ಮೊದಲಾದವರು ಉಪಸ್ಥಿತರಿದ್ದರು