ಪುತ್ತೂರು: ಯುವಕ ಆತ್ಮಹತ್ಯೆ
ಪುತ್ತೂರು: ಯುವ ವಿಜ್ಞಾನಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕು ಆರ್ಯಾಪು ಕಲ್ಲರ್ಪೆಯಲ್ಲಿ ನಡೆದಿದೆ. ಭರತ್ ಆಚಾರ್ಯ ಆತ್ಮಹತ್ಯೆ ಮಾಡಿಕೊಂಡವರು.
ಹೈದರಾಬಾದಿನಲ್ಲಿ ವಿಜ್ಞಾನಿಯಾಗಿದ್ದ ಭರತ್ ನಿನ್ನೆ ರಾತ್ರಿ ಮನೆಗೆ ಬಂದಿದ್ದು, ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿದ್ಯಾಭ್ಯಾಸ ಮುಗಿಸಿ ಕಳೆದ ತಿಂಗಳಷ್ಟೇ ಉದ್ಯೋಗ ಪಡೆದಿದ್ದರು. ಮೃತರು ಸಹೋದರ ಪತ್ರಕರ್ತ ಗಣೇಶ್ ಕಲ್ಲರ್ಪೆ ಸಹೋದರಿ ಹಾಗೂ ತಂದೆಯನ್ನು ಅಗಲಿದ್ದಾರೆ.