ಗಾಝಾ ಪ್ರದೇಶದ ಮೇಲೆ ಮತ್ತೆ ಬಾಂಬ್ ದಾಳಿ ನಡೆಸಿದ ಇಸ್ರೇಲ್; 200ಕ್ಕೂ ಅಧಿಕ ಮಂದಿ ಸಾವು-ವರದಿ
ಕದನ ವಿರಾಮ ಮುಕ್ತಾಯಗೊಂಡ ಬಳಿಕ ಗಾಝಾ ಪ್ರದೇಶದ ಮೇಲೆ ಇಸ್ರೇಲ್ ಬಾಂಬ್‍ಗಳ ಸುರಿಮಳೆ ನಡೆಸಿದ್ದು 200ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಮಕ್ಕಳು, ಮಹಿಳೆಯರು ಸೇರಿದಂತೆ ಹಲವಾರು ಮಂದಿ ಗಾಯಗೊಂಡಿದ್ದಾರೆ.
![](https://newsbites.in/wp-content/uploads/2023/12/IMG_20231203_075529.jpg)
ಈ ಮಧ್ಯೆ, ಹಮಾಸ್ ವಿರುದ್ಧದ ಯುದ್ಧದಲ್ಲಿ ಅಮೆರಿಕವು ಇಸ್ರೇಲ್‍ಗೆ ಬಂಕರ್ ಬಸ್ಟರ್(ಬಂಕರ್ ಸ್ಫೋಟಿಸುವ) ಬಾಂಬ್ ಹಾಗೂ ಇತರ ಯುದ್ಧ ಸಾಮಾಗ್ರಿಗಳನ್ನು ನೀಡಿದೆ ಎಂದು ವರದಿಯಾಗಿದೆ.