ಕುಂಬ್ರ ಮರ್ಕಝುಲ್ ಹುದಾಗೆ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಪ್ರಮುಖರ ಭೇಟಿ
ಕುಂಬ್ರ:
ಮರ್ಕಝುಲ್ ಹುದಾ ಮಹಿಳಾ ಕಾಲೇಜಿಗೆ ಸೌದಿ ಅರೇಬಿಯ ಎಂ ಎಚ್ ಕೆ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಫಾರೂಕ್ ಹಾಜಿ ಕನ್ಯಾನ ಮತ್ತು ಪ್ರಮುಖ ರಾದ ಎಂ
.ಬಿ ಮದನಿ ಜಾಲ್ಸೂರು
ಭೇಟಿ ನೀಡಿದರು.
ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಫಾರೂಕ್ ಹಾಜಿ ಕನ್ಯಾನ
ಅವರು ಶುದ್ದ ಹೃದಯ ,ತೆರೆದ ಮನಸ್ಸು ಎಲ್ಲಿರುತ್ತದೋ ಅಲ್ಲಿ ಯಶಸ್ಸು ವಿಜ್ರಂಬಿಸುತ್ತದೆ. ಪ್ರತೀ ಹಂತದಲ್ಲೂ ಜಾಗರೂಕ ನಡೆ, ಚಿಂತನೆಯ ಹೆಜ್ಜೆ ನಮ್ಮನ್ನು ಎತ್ತರಕ್ಕೇರಿಸುತ್ತದೆ . ಈ ನಿಟ್ಟಿನಲ್ಲಿ ನೂತನ ಸಮಿತಿ ಸಮರ್ಥ ಸಾಧನೆಯ ಮೈಲುಗಲ್ಲಾಗಲಿ. ಎಂದು ಹೇಳಿದರು.
ಬಳಿಕ ಕ್ಯಾಂಪಸ್ ದರ್ಶಿಸಿದ ಅವರು ನೂತನ ಸಮಿತಿಯ ಹೃಸ್ವ ಅವದಿಯ ಬೆಳವಣಿಗೆ ಕಂಡು ಸಂತೋಷ ವ್ಯಕ್ತಪಡಿಸಿದರು. ಆಡಳಿತ ಮಂಡಳಿ ವತಿಯಿಂದ ಅತಿಥಿಗಳಿಗೆ ಶಾಲು ಹೊದಿಸಿ ಗೌರವಿಸಲಾಯಿತು.
ಮರ್ಕಝುಲ್ ಹುದಾ ಕರ್ನಾಟಕ ಅಧ್ಯಕ್ಷ ಅರಿಯಡ್ಕ ಅಬ್ದುರ್ರಹ್ಮಾನ್ ಹಾಜಿ ಸಭಾಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ ಸ್ವಾಗತಿಸಿದರು.
ಉಪಾದ್ಯಕ್ಷ ಎಂಎಸ್ಎಂ ಅಬ್ದುರ್ರಶೀದ್ ಝೈನಿ ವಿಷಯ ಮಂಡಿಸಿದರು. ಸಭೆಯಲ್ಲಿ ಕೋಶಾಧಿಕಾರಿ ಯೂಸುಫ್ ಗೌಸಿಯ ಸಾಜ, ಯೂಸುಫ್ ಹಾಜಿ ಕೈಕಾರ, ಕಾರ್ಯದರ್ಶಿ ಗಳಾದ ರಶೀದ್ ಬಿ ಕೆ, ಯೂಸುಫ್ ಮೈದಾನಿಮೂಲೆ, ಆಶಿಕುದ್ದೀನ್ ಅಖ್ತರ್, ಕರೀಂ ಕಾವೇರಿ, ವ್ಯವಸ್ಥಾಪಕರಾದ ಉಮರ್ ಅಮ್ಜದಿ ಮುಂತಾದವರು ಉಪಸ್ಥಿತರಿದ್ದರು.