ಹುಲಿ ದಾಳಿ: ಗ್ರಾಮಸ್ಥರ ಆಕ್ರೋಶ
ರೈತನ ಮೇಲೆ ಹುಲಿ ದಾಳಿ ನಡೆಸಿದ ಘಟನೆ ಮೈಸೂರು ನಂಜನಗೂಡು ತಾಲೂಕಿನ ಮಹದೇವ ನಗರದಲ್ಲಿ ವರದಿಯಾಗಿದೆ. ದನ ಮೇಯಿಸುತ್ತಿದ್ದ ರೈತ ವೀರಭದ್ರ ಭೋವಿ ಹುಲಿ ದಾಳಿಗೊಳಗಾದ ರೈತ.
ಗ್ರಾಮದ ಮತ್ತಿಮರದ ಜೇನುಕಟ್ಟೆಯ ಬಳಿ ವೀರಭದ್ರ ದನ ಮೇಯಿಸುತ್ತಿದ್ದಾಗ ಘಟನೆ ಸಂಭವಿಸಿದೆ ಎನ್ನಲಾಗಿದೆ.
ರೈತನ ಮೇಲೆ ದಾಳಿ ಮಾಡುವ ಮೊದಲು ಹಸು ಹಾಗೂ ಕರುವಿನ ಮೇಲೆ ಹುಲಿ ದಾಳಿ ನಡೆಸಿದೆ. ಈ ವೇಳೆ ಹಸುವನ್ನು ರಕ್ಷಿಸಲು ವೀರಭದ್ರ ಹೋಗಿದ್ದಾಗ ಅವರ ಮೇಲೆ ಹುಲಿ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.
ಘಟನೆ ಬಳಿಕ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ರೈತರು ಆಕ್ರೋಶ ಹೊರಹಾಕಿರುವುದಾಗಿ ವರದಿಯಾಗಿದೆ.