ವಾಸಿಸಲು ಮನೆಯಿಲ್ಲದ ಕಾರ್ಯಕರ್ತನ ನೋವಿಗೆ ಸ್ಪಂದಿಸಿ ಮನೆ ನಿರ್ಮಿಸಿಕೊಟ್ಟ ಮುಂಡೂರು ವಲಯ ಕಾಂಗ್ರೆಸ್
ಪುತ್ತೂರು: ಮನೆ ಇಲ್ಲದೇ ಸಂಕಷ್ಟದಲ್ಲಿದ್ದ ಕುಟುಂಬವೊಂದಕ್ಕೆ ಮುಂಡೂರು ವಲಯ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಮನೆ ನಿರ್ಮಿಸಿಕೊಡುವ ಮೂಲಕ ಮಾದರಿಯಾಗಿದ್ದಾರೆ.
ಮುಂಡೂರು ಬೂತ್ 90ರ ಕಾರ್ಯದರ್ಶಿ ಜಗದೀಶ್ ಬದಿಯಡ್ಕ ಅವರಿಗೆ ಮುಂಡೂರು ವಲಯ ಕಾಂಗ್ರೆಸ್ ವತಿಯಿಂದ ನೂತನ ಮನೆ ನಿರ್ಮಿಸಲಾಗಿದ್ದು ಮನೆಯ ಹಸ್ತಾಂತರ ಕಾರ್ಯವನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ್ ರೈ ನೆರವೇರಿಸಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಯಾಕೂಬ್ ಮುಲಾರ್, ಎಸ್.ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ ನರಿಮೊಗರು, ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಸುಪ್ರೀತ್ ಕಣ್ಣರಾಯ, ಮುಂಡೂರು ಬೂತ್ ಅಧ್ಯಕ್ಷ ಇಬ್ರಾಹಿಂ ಮುಲಾರ್, ಕೆಮ್ಮಿಂಜೆ ಬೂತ್ ಅಧ್ಯಕ್ಷ ಗಣೇಶ್ ಕೊರುಂಗು, ಪ್ರಮುಖರಾದ ಅಣ್ಣಿ ಪೂಜಾರಿ ಹಿಂದಾರು, ಅಶ್ರಫ್ ಮುಲಾರ್, ರಝಾಕ್ ಮುಲಾರ್, ಜಗದೀಶ್ ಬದಿಯಡ್ಕ ಮತ್ತಿತರ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.