ಉಪ್ಪಿನಂಗಡಿ: ಯುವತಿಯ ವಿಚಾರದಲ್ಲಿ ಯುವಕನಿಗೆ ಹಲ್ಲೆ- ಇಬ್ಬರ ವಿರುದ್ದ ಪ್ರಕರಣ ದಾಖಲು
ಉಪ್ಪಿನಂಗಡಿ: ಯುವಕನೋರ್ವನಿಗೆ ಇಬ್ಬರು ಹಲ್ಲೆ ನಡೆಸಿದ ಘಟನೆ ಆ.29ರಂದು ಉಪ್ಪಿನಂಗಡಿಯಲ್ಲಿ ನಡೆದಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿಯೋರ್ವಳ ವಿಚಾರಕ್ಕೆ ಸಂಬಂಧಿಸಿ ಆಕೆಯ ಸಂಬಂಧಿಕರಿಬ್ಬರು ಯುವಕನಿಗೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಸುನೀಲ್ ಕುಮಾರ್ (32) ಹಲ್ಲೆಗೊಳಗಾದವರಾಗಿದ್ದು, ಪ್ರವೀಣ್ ಹಾಗೂ ಶೇಖರ ಹಲ್ಲೆ ನಡೆಸಿದ ಆರೋಪಿಗಳು ಎಂದು ತಿಳಿದು ಬಂದಿದೆ.
ಸುನೀಲ್ ಅವರು ಉಪ್ಪಿನಂಗಡಿಯ ಕಾಂಪ್ಲೆಕ್ಸ್‌ವೊಂದರ ಅಂಗಡಿಯಲ್ಲಿ ಕೆಲಸದಲ್ಲಿದ್ದು ಅಲ್ಲಿಗೆ ಬಂದ ಆರೋಪಿಗಳು ಯುವತಿಯೋರ್ವಳನ್ನು ಸುನೀಲ್ ಕುಮಾರ್ ಪ್ರೀತಿಸುವ ವಿಚಾರದಲ್ಲಿ ತಗಾದೆ ತೆಗೆದು, ಅವ್ಯಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾರೆ ಎಂದು ಸುನೀಲ್ ಕುಮಾರ್ ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.