Author: news_bites_admin

ಕರಾವಳಿರಾಜಕೀಯರಾಜ್ಯ

ಸರಕಾರಿ ಸ್ಥಳದಲ್ಲಿರುವ ಪೂಜಾಸ್ಥಳಗಳ ಸಕ್ರಮಕ್ಕೆ ವಿಶೇಷ ಕಾನೂನು ಜಾರಿಗೆ ಆಗ್ರಹ
ಹಿಂದುತ್ವದ ಮೇಲೆ ಅಧಿಕಾರ ಪಡೆದ ಬಿಜೆಪಿ ಮಾಡಿಲ್ಲ, ನಾವು ಮಾಡುತ್ತೇವೆ-ಶಾಸಕ ರೈ

ಪುತ್ತೂರು: ಸರಕಾರಿ ಜಾಗದಲ್ಲಿರುವ ಪೂಜಾ ಸ್ಥಳಗಳಾದ ದೇವಸ್ಥಾನ, ದೈವಸ್ಥಾನ, ಭಜನಾಮಂದಿರ, ಮಸೀದಿ ಮತ್ತು ಚರ್ಚುಗಳನ್ನು ಸಕ್ರಮ ಮಾಡುವ ಮೂಲಕ ಸರಕಾರ ಮತ್ತು ಪೂಜಾಸ್ಥಳದ ಹೆಸರಿನಲ್ಲಿ ಜಂಟಿ ಆರ್‌ಟಿಸಿ

Read More
ಜಿಲ್ಲೆ

ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ವಿದ್ಯಾಕುಮಾರಿ.ಕೆ

ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ವಿದ್ಯಾಕುಮಾರಿ.ಕೆ. ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ. ಈ ಹಿಂದೆ ಇದ್ದ ಜಿಲ್ಲಾಧಿಕಾರಿ ಕೂರ್ಮ ರಾವ್ ಎಂ. ಅವರು ವರ್ಗಾವಣೆಗೊಂಡಿದ್ದಾರೆ.

Read More
ರಾಜ್ಯ

ಖಿದ್ಮಾ ಫೌಂಡೇಶನ್ ವತಿಯಿಂದ ರಾಜ್ಯಮಟ್ಟದ ಖಿದ್ಮಾ ಕಾವ್ಯ ಮತ್ತು ಸಾಂಸ್ಕೃತಿಕ ಸಮಾರಂಭ, ಪ್ರಶಸ್ತಿ ಪ್ರದಾನ

ಖಿದ್ಮಾ ಫೌಂಡೇಶನ್ ನಿಂದ ಸಾಹಿತ್ಯ ಕಾರ್ಯಕ್ರಮಖಿದ್ಮಾ ಫೌಂಡೇಶನ್ ಕರ್ನಾಟಕ ಆಯೋಜನೆ ಮಾಡಿರುವ ರಾಜ್ಯಮಟ್ಟದ ಖಿದ್ಮಾ ಕಾವ್ಯ ಮತ್ತು ಸಾಂಸ್ಕೃತಿಕ ಸಮಾರಂಭ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಭಾನುವಾರದಂದು

Read More
ಕ್ರೈಂರಾಜ್ಯ

‘ಅಪ್ಪ, ಅಮ್ಮ ನನ್ನನ್ನ ಕ್ಷಮಿಸಿ, ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿ ಆತ್ಮಹತ್ಯೆ

ಚೀನಾ ಆ್ಯಪ್ ಮೂಲಕ ಲೋನ್ ಪಡೆದಿದ್ದ ವಿದ್ಯಾರ್ಥಿ ನೇಣಿಗೆ ಶರಣಾಗಿರುವಂತಹ ಘಟನೆ ನಗರದ ಹೆಚ್ಎಂಟಿ ಕ್ವಾರ್ಟರ್ಸ್ನಲ್ಲಿ ನಡೆದಿದೆ. ತೇಜಸ್ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಸ್ನೇಹಿತ ಮಹೇಶ್ ಗಾಗಿ

Read More
ಕರಾವಳಿಕ್ರೈಂ

ಉಪ್ಪಿನಂಗಡಿ ಪೊಲೀಸ್ ಠಾಣಾ ಹೆಡ್ ಕಾನ್ಸ್‌ಟೇಬಲ್‌ ಕೃಷ್ಣಪ್ಪ ನಾಯ್ಕ್ ನಿಧನ

ಪುತ್ತೂರು: ಉಪ್ಪಿನಂಗಡಿ ಠಾಣಾ ಹೆಡ್ ಕಾನ್ಸ್‌ಟೇಬಲ್‌ ಮಾಣಿ ಸಮೀಪದ ನೇರಳಕಟ್ಟೆ ನಿವಾಸಿ ಕೃಷ್ಣಪ್ಪ ನಾಯ್ಕ್ ಜೆ ಜುಲೈ 12ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕೃಷ್ಣಪ್ಪನವರು ಉಪ್ಪಿನಂಗಡಿ

Read More
ಕರಾವಳಿ

ಕಡಬದಲ್ಲಿ ಕೂಡಲೇ ವಿವಿಧ ಇಲಾಖೆಗಳ ಕಚೇರಿಗಳನ್ನು ತೆರೆಯಲು ಒತ್ತಾಯಿಸಿ ಮೀರಾ ಸಾಹೇಬ್ ನೇತೃತ್ವದಲ್ಲಿ ಪ್ರತಿಭಟನೆ

ಕಡಬ ತಾಲೂಕು ರಚನೆ ಆಗಿ 2018ರಲ್ಲಿ ಮಂಜೂರಾತಿ ಆಗಿದ್ದು ಮಿನಿ ವಿಧಾನ ಸೌಧದ ಕಟ್ಟಡ ಪೂರ್ತಿಯಾಗಿದೆ. ಆದರೆ ತಾಲೂಕು ಕಚೇರಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು ಉಳಿದ 18 ಕಚೇರಿಗಳು ಇನ್ನೂ ಕಾರ್ಯವೆಸಗದೇ ಇರುವುದರಿಂದ ಕಡಬ ತಾಲೂಕಿನ ಜನತೆ ತೀವ್ರ ತೊಂದರೆಗೆ ಸಿಲುಕಿದ್ದಾರೆ. ಈಗಾಗಲೇ ಅನೇಕ ಮನವಿಗಳನ್ನು ನೀಡಿದ್ದರೂ ಅದಕ್ಕೆ ಸೂಕ್ತ ಸ್ಪಂದನೆ ಸಿಕ್ಕಿಲ್ಲ, ಇದು ನಮ್ಮ ಕೊನೆಯ ಮನವಿಯಾಗಿದ್ದು ಇದಕ್ಕೂ ಸ್ಪಂದನೆ ಸಿಗದೇ ಇದ್ದಲ್ಲಿ ಮುಂದಕ್ಕೆ ಉಗ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕಡಬ ತಾಲೂಕು ಹೋರಾಟ ಸಮಿತಿಯ ಸಂಚಾಲಕರಾದ ಸಯ್ಯದ್ ಮೀರಾ ಸಾಹೇಬ್ ಎಚ್ಚರಿಕೆ ನೀಡಿದ್ದಾರೆ. ಕಡಬ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಕಡಬ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಜು.11ರಂದು ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು ಕಡಬದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಇದ್ದರೂ ಡಯಾಲಿಸಿಸ್ ಹಾಗೂ ವೈದ್ಯರ ಕೊರತೆ ಇದೆ, ಕಡಬದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಇಲ್ಲ, ಸ್ಥಳಾವಕಾಶ ಇದ್ದರೂ ಸಬ್ ರಿಜಿಸ್ಟಾರ್ ಕಚೇರಿ ತೆರೆದಿರುವುದಿಲ್ಲ, ಸಮಾಜ ಕಲ್ಯಾಣ ಇಲಾಖೆ, ಕೃಷಿ ತೋಟಗಾರಿಕೆ, ಪಶು ವೈದ್ಯಕೀಯ, ಅರಣ್ಯ, ಲೋಕೋಪಯೋಗಿ ಇಲಾಖೆ, ಅಲ್ಪಸಂಖ್ಯಾತ, ಹಿಂದುಳಿದ, ಮಹಿಳಾ ಮಕ್ಕಳ ಇಲಾಖೆ, ಅಧಿಕಾರಿಗಳು ಕಾರ್ಯ ನಿರ್ವಹಿಸುವುದಿಲ್ಲ, ಸಾರ್ವಜನಿಕ ಬಸ್‌ಸ್ಟ್ಯಾಂಡ್ ಇಲ್ಲ, ಇಂದಿರಾ ಕ್ಯಾಂಟೀನ್ ಇಲ್ಲ, ಅಗ್ನಿ ಶಾಮಕ ದಳಕ್ಕೆ ಸ್ಥಳ ಕಾಯ್ದಿರಿಸಿದರೂ ಕಾರ್ಯ ನಿರ್ವಹಿಸಲು ಕ್ರಮ ವಹಿಸಿಲ್ಲ, ಅಪ್‌ಗ್ರೇಡ್ ಕಾಲೇಜು ಸ್ಥಾಪನೆ ಆಗಿಲ್ಲ, ಐಟಿಐ, ಪಾಲಿಟೆಕ್ನಿಕ್ ಮುಂತಾದ ವಿದ್ಯಾಭ್ಯಾಸಕ್ಕೂ ಅವಕಾಶವಿಲ್ಲ ಎಂದು ಅವರು ಹೇಳಿದರು. ಕಡಬದಲ್ಲಿ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಕಚೇರಿ ತೆರೆಯಬೇಕು, ನೆಲ್ಯಾಡಿ ಮತ್ತು ಕಾಣಿಯೂರಲ್ಲಿ ಪೊಲೀಸ್ ಠಾಣೆ ತೆರೆಯಬೇಕು ಎಂದು ಆಗ್ರಹಿಸಿದ ಅವರು ಕಡಬ ತಾಲೂಕಿನಲ್ಲಿ ಅಕ್ರಮ ಸಕ್ರಮ ಮನೆ ನಿವೇಶನ ಹಾಗೂ ಕುಟುಂಬದ ಆಸ್ತಿ ಪಾಲು ಪಟ್ಟಿ ಹಲವಾರು ವರ್ಷ ಕಳೆದರೂ ಕೂಡಾ ಸರ್ವೇ ಪ್ಲಾಟಿಂಗ್ ಆಗುತ್ತಿಲ್ಲ, ಇವೆಲ್ಲದರ ಬಗ್ಗೆ ಸರಕಾರ ಕೂಡಲೇ ಗಮನಹರಿಸಿ ಸೂಕ್ತ ಕ್ರಮ ವಹಿಸಬೇಕು ಎಂದು ಅವರು ಆಗ್ರಹಿಸಿದರು. ನಮ್ಮ ಹಲವು ವರ್ಷಗಳ ಬೇಡಿಕೆಯ ಫಲವಾಗಿ ಸುಮಾರು 42 ಗ್ರಾಮಗಳನ್ನೊಳಗೊಂಡ ಕಡಬ ತಾಲೂಕು ಮಂಜೂರಾಗಿ 5ವರ್ಷವಾದರೂ ಮಿನಿ ವಿಧಾನ ಸೌಧದ ಕಟ್ಟಡ ಪೂರ್ತಿಯಾಗಿ ತಾಲೂಕು ಕಚೇರಿ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಈ ವರೆಗೆ ತಾಲೂಕು ಮಟ್ಟದ ವಿವಿಧ ಇಲಾಖಾ ಕಚೇರಿಗಳು ಪ್ರಾರಂಭಗೊಂಡಿಲ್ಲ. ಅಂದಾಜು 5 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಕಡಬ ತಾಲೂಕು ಪಂಚಾಯತ್‌ನಲ್ಲೂ ಹಲವು ಕಚೇರಿಗಳು ಖಾಲಿ ಇದೆ. ಮುಂದಕ್ಕೂ ಇದೇ ಪರಿಸ್ಥಿತಿ ಮುಂದುವರಿದಲ್ಲಿ ಅನಿವಾರ್ಯವಾಗಿ ಧರಣಿ, ಮುಷ್ಕರ, ಬಂದ್ ಮಾಡಲು ನಾವು ಹಿಂಜರಿಯುವುದಿಲ್ಲ ಎಂದು ಮೀರಾ ಸಾಹೇಬ್ ಹೇಳಿದರು. ಪ್ರತಿಭಟನೆಯಲ್ಲಿ ಹಲವಾರು ಮಂದಿ ಭಾಗವಹಿಸಿದ್ದರು. ಪ್ರತಿಭಟನೆ ಬಳಿಕ ಬಳಿಕ ಉಪತಹಸಿಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು

Read More
ಕರಾವಳಿ

ಬಸ್ಕಿ ತೆಗೆದು ವಿದ್ಯಾರ್ಥಿನಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು-ಮುಖ್ಯ ಶಿಕ್ಷಕನ ವಿರುದ್ಧ ದೂರು

ಪುತ್ತೂರು: ತರಗತಿಯಲ್ಲಿ ಪೀಕಲಾಟ ಮಾಡಿದ್ದಾಳೆಂದು ಆರೋಪಿಸಿ ಆರನೇ ತರಗತಿಯ ವಿದ್ಯಾರ್ಥಿನಿಯನ್ನು ಶಿಕ್ಷಕ ಸುಮಾರು ಹೊತ್ತಿನ ತನಕ ಬಸ್ಕಿ ತೆಗೆಸಿದ್ದು ಅಸ್ವಸ್ಥ ವಿದ್ಯಾರ್ಥಿನಿಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾವು ಮಾಡ್ನೂರು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಈ ಘಟನೆ ನಡೆದಿದ್ದು ಶಾಲೆಯ ಪ್ರಭಾರ ಮುಖ್ಯಗುರು ವಿದ್ಯಾರ್ಥಿನಿಯನ್ನು ಬಸ್ಕಿ ತೆಗೆಯುವಂತೆ ಎಚ್ಚರಿಸಿದ್ದರು ಎನ್ನಲಾಗಿದೆ. ಸುಮಾರು ಹೊತ್ತಿನ ಬಳಿಕ ಬಸ್ಕಿ ತೆಗೆದ ವಿದ್ಯಾರ್ಥಿನಿ ಅಸ್ವಸ್ಥಗೊಂಡಿದ್ದಳು. ತಕ್ಷಣ ಬಾಲಕಿಯನ್ನು ಪೋಷಕರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಸ್ಕಿ ತೆಗೆಸಿದ ಪ್ರಭಾರ ಮುಖ್ಯಗುರುಗಳ ವಿರುದ್ಧ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಶಾಸಕರಿಗೆ ಪೋಷಕರು ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.

Read More
ಕರಾವಳಿ

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸುಳ್ಯಕ್ಕೆ ಭೇಟಿ

ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಸುಳ್ಯ ತಾಲೂಕು ಕಚೇರಿಗೆ ಜು.12ರಂದು ಭೇಟಿ ನೀಡಿದ್ದಾರೆ. ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರಥಮ ಬಾರಿಗೆ ಸುಳ್ಯ ತಾಲೂಕಿಗೆ ಆಗಮಿಸಿದ ಅವರು

Read More
ರಾಜಕೀಯರಾಜ್ಯ

ರಾಹುಲ್ ಗಾಂಧಿ ಪರ ಕಾಂಗ್ರೆಸ್ ಮೌನ ಪ್ರತಿಭಟನೆ

 ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ ರಾಜಕೀಯ ಜೀವನ ಮುಗಿಸಲು ಕೇಂದ್ರ ಸರ್ಕಾರ ಪಿತೂರಿ ರೂಪಿಸಿದೆ ಎಂದು ಆರೋಪಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಇಂದು

Read More
ಕರಾವಳಿರಾಜಕೀಯ

ರಾಹುಲ್ ಗಾಂಧಿ ವಿರುದ್ದ ಷಡ್ಯಂತ್ರ ಆರೋಪ- ಪುತ್ತೂರಿನಲ್ಲಿ ಬಿಜೆಪಿ ವಿರುದ್ದ ಕಾಂಗ್ರೆಸ್ ಪ್ರತಿಭಟನೆ

ಪುತ್ತೂರು: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವವನ್ನು ಅನೂರ್ಜಿತಗೊಳಿಸಲು ಹುನ್ನಾರ ನಡೆಯುತ್ತಿದೆ ಎಂದು ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಪುತ್ತೂರು, ವಿಟ್ಲ,

Read More
error: Content is protected !!