ಕ್ರೈಂರಾಜ್ಯ

ಕ್ಯಾಶ್‌ಬ್ಯಾಕ್ ಆಫರ್: ಸಾವಿರಾರು ರೂಪಾಯಿ ಕಳೆದುಕೊಂಡ ಹೊಟೇಲ್ ಮಾಲಿಕ!



ಆನ್‌ಲೈನ್ ಪೇಮೆಂಟ್ ಆ್ಯಪ್‌ನಲ್ಲಿ ನಿಮಗೆ ಕ್ಯಾಶ್ ಬ್ಯಾಕ್ ಬರುತ್ತದೆ ಎಂದು ಹೇಳಿ ವ್ಯಕ್ತಿಯೊಬ್ಬರ ಅಕೌಂಟ್ನಿಂದ ವಂಚಕರು ಸಾವಿರಾರು ರೂಪಾಯಿ ದೋಚಿರುವ ಘಟನೆ ವರದಿಯಾಗಿದೆ.

ಬೆಂಗಳೂರು ನಗರದ ದಯಾನಂದ ಲೇಔಟ್‌ನ ರಾಮಮೂರ್ತಿನಗರದ ವ್ಯಕ್ತಿಯೋರ್ವರು ವಂಚನೆಗೆ ಒಳಗಾಗಿದ್ದು ವ್ಯಕ್ತಿ. ಈ ವ್ಯಕ್ತಿಯ ಬಳಿ ಬಂದ ಇಬ್ಬರು ಅಪರಿಚಿತರು ತಾವು ಬ್ಯಾಂಕ್ ಎಕ್ಸಿಕ್ಯೂಟಿವ್‌ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

ನಂತರ ಪ್ಯಾರುಲ್ ಷಾ ಅವರಿಗೆ ನೀವು ಈ ಆ್ಯಪ್ ಮೂಲಕ ಆನ್ಲೈನ್ ಪೇಮೆಂಟ್ ಮಾಡಿದರೇ ಪ್ರತಿದಿನ 300 ರೂ. ಕ್ಯಾಶ್ ಬ್ಯಾಕ್ ಬರುತ್ತದೆ ಎಂದು ಹೇಳಿದ್ದಾರೆ. ಅದನ್ನು ಕೇಳಿದ ವ್ಯಕ್ತಿ ಆ ಅಪರಿಚಿತ ವ್ಯಕ್ತಿಗೆ ತಮ್ಮ ಮೊಬೈಲ್ ನೀಡಿದ್ದಾರೆ. ನಂತರ ಬ್ಯಾಂಕ್ ಖಾತೆಯ ವಿವರಗಳನ್ನೂ ಸಹ ಅವರಿಗೆ ಹೇಳಿದ್ದಾರೆ ನಂತರ ಈ ಇಬ್ಬರು ಕೆಲ ಕಾಲ ಮೊಬೈಲ್‌ ಬಳಸಿ ಆ್ಯಪ್ ಇನ್ಸ್ಟಾಲ್ ಆಗಿದೆ ಎಂದು ಹೇಳಿ ಮೊಬೈಲ್ ಮರುಕಳಿಸಿ ಅಲ್ಲಿಂದ ತೆರಳಿದ್ದಾರೆ.

ನಂತರ ಆ ವ್ಯಕ್ತಿ ತಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ತಮ್ಮ ಖಾತೆಯಿಂದ 52 ಸಾವಿರ ರೂ. ವರ್ಗಾವಣೆಗೊಂಡಿರುವುದು ತಿಳಿದಿದೆ. ಇದರಿಂದ ಗಾಬರಿಗೊಂಡ ಅವರು ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!