ಸಾರೆಪುಣಿ ಅಂಗನವಾಡಿ ವಠಾರ ಸ್ವಚ್ಛತೆ ಮಾಡಿ ಮಾದರಿಯಾದ ವಿಖಾಯ ಕಾರ್ಯಕರ್ತರು
ಪುತ್ತೂರು: SKSSF ವಿಖಾಯ ತಂಡದ ವತಿಯಿಂದ ಕುಂಬ್ರ ಸಮೀಪದ ಸಾರೆಪುಣಿ ಅಂಗನವಾಡಿ ಕೇಂದ್ರದ ಆವರಣದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಮರದ ಗೆಲ್ಲುಗಳನ್ನು ತೆಗೆದು ಒಳ ಭಾಗದಲ್ಲಿ ಮತ್ತು ಹೊರ ಭಾಗದಲ್ಲಿ ಹುಲ್ಲು ಕಸ ಕಡ್ಡಿಗಳನ್ನು ತೆರವುಗೊಳಿಸಿ ಸ್ವಚ್ಛ ಮಾಡಲಾಯಿತು.
ಅಲ್ಲದೇ ಸಾರೆಪುಣಿಯಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್ ನ್ನು ಸ್ವಚ್ಛಗೊಳಿಸಲಾಯಿತು. SKSSF ಸಾರೆಪುಣಿ ಶಾಖಾ ಅಧ್ಯಕ್ಷ ಅಶ್ರಫ್ ಸಾರೆಪುಣಿ, ವಿಖಾಯ ಕಾರ್ಯಕರ್ತರಾದ ಉಸ್ಮಾನ್ ಸಾರೆಪುಣಿ, ಝಕರಿಯ, ಶರಫುದ್ದಿನ್, ಮುಝಮ್ಮಿಲ್, ಉನೆಯ್ಸ್, ಮಿನಾಜ್, ಮುಸ್ತಫಾ, ಮುಬಶೀರ್ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವಿಖಾಯ ತಂಡದವರ ಕಾರ್ಯ ಸ್ಥಳೀಯವಾಗಿ ಮೆಚ್ಚುಗೆಗೆ ಪಾತ್ರವಾಯಿತು