ಈಜಿಪ್ಟ್: 11ನೇ ಶತಮಾನದ ಐತಿಹಾಸಿಕ ಅಲ್-ಹಕೀಂ ಮಸೀದಿಗೆ ಭೇಟಿ ನೀಡಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿಯವರು ಈಜಿಪ್ಟ್ ಪ್ರವಾಸದ ಎರಡನೇ ದಿನವಾದ ಜೂ.25ರಂದು ಕೈರೋದಲ್ಲಿಯ 11ನೇ ಶತಮಾನದ ಐತಿಹಾಸಿಕ ಅಲ್-ಹಕೀಂ ಮಸೀದಿಗೆ ಭೇಟಿ ನೀಡಿದರು.

ಈ ಮಸೀದಿಯು ಭಾರತದ ದಾವೂದಿ ಬೊಹ್ರಾ ಸಮುದಾಯದ ನೆರವಿನೊಂದಿಗೆ ಇತ್ತೀಚೆಗೆ ನವೀಕರಣಗೊಂಡಿದೆ. ಮೂರು ತಿಂಗಳ ಹಿಂದೆ ನವೀಕರಣ ಪೂರ್ಣಗೊಂಡಿರುವ ಮಸೀದಿಯ ಸುತ್ತಲಿನ ಪರಿಸರವನ್ನು ಮೋದಿ ವೀಕ್ಷಿಸಿದರು. 1012ರಲ್ಲಿ ನಿರ್ಮಿಸಲಾಗಿ ಮಸೀದಿಯ ಗೋಡೆಗಳು ಮತ್ತು ದ್ವಾರಗಳಲ್ಲಿ ಕೆತ್ತಲಾಗಿರುವ ಸಂಕೀರ್ಣ ಶಾಸನಗಳನ್ನು ಮೋದಿ ಶ್ಲಾಘಿಸಿದರು ಎಂದು ವರದಿಯಾಗಿದೆ.