ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವ ಸರಕಾರದ ತೀರ್ಮಾನದ ವಿರುದ್ಧ ಹೋರಾಟ -ಹಸಂತಡ್ಕ
ಪುತ್ತೂರು: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯಲು ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದು ಇದು ಖಂಡನೀಯ, ಇದನ್ನು ಹಿಂಪಡಯಬೇಕೆಂದು ಒತ್ತಾಯಿಸಿ ವಿಶ್ವಹಿಂದೂ ಪರಿಷತ್, ಬಜರಂಗದಳ ಹೋರಾಟ ನಡೆಸಲಿದೆ ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ತಿಳಿಸಿದ್ದಾರೆ.

ಮತಾಂತರ ನಿಷೇಧ ಕಾಯ್ದೆ ಇರುವುದು ಯಾವುದೇ ಮತ, ಧರ್ಮದ ವಿರುದ್ದವಲ್ಲ, ಬಲವಂತದ ಮತಾಂತರರ ವಿರುದ್ಧ ಮಾಡಿರುವ ಕಾನೂನನ್ನು ಸಮಾಜ ಸ್ವೀಕರಿಸಿದೆ. ಇದೀಗ ಅದನ್ನು ವಾಪಸ್ ಪಡೆಯುವ ಮೂಲಕ ಅಲ್ಪಸಂಖ್ಯಾತ ಓಲೈಕೆಗಾಗಿ ಸರಕಾರ ಮುಂದಾಗಿದೆ, ಸಿದ್ದರಾಮಯ್ಯ ಸರಕಾರ ಕೂಡಲೇ ಕಾಯ್ದೆ ವಾಪಸ್ ಪಡೆಯಬೇಕು ಎಂದು ಹಸಂತಡ್ಕ ತಿಳಿಸಿದ್ದಾರೆ.