ಕರಾವಳಿ

ಕೆಲವೇ ದಿನಗಳಲ್ಲಿ ಪುತ್ತೂರು ಶಾಸಕರ ನೂತನ ಕಚೇರಿ ಪ್ರಾರಂಭ: 6 ಸಿಬಂದಿ ನೇಮಕ

ಪುತ್ತೂರು: ಮುಂದಿನ 15 ದಿನದೊಳಗೆ ನನ್ನ ನೂತನ ಕಚೇರಿ ಪುತ್ತೂರಿನಲ್ಲಿ ಪ್ರಾರಂಭವಾಗಲಿದ್ದು ಸರಕಾರಿ ಆಸ್ಪತ್ರೆಯ ಬಳಿ ಇರುವ ಈಗಿನ ಪುಡಾ ಕಟ್ಟಡದಲ್ಲಿ ನೂತನ ಕಚೇರಿ ಕಾರ್ಯಾರಂಭಿಸಲಿದೆ ಎಂದು ಶಾಸಕರಾದ ಅಶೋಕ್ ರೈ ತಿಳಿಸಿದರು.

ನೂತನ ಕಚೇರಿಯಲ್ಲಿ ಸಾರ್ವಜನಿಕರ ಸೇವೆಗಾಗಿ 6 ಮಂದಿ ಸಿಬಂದಿಯನ್ನು ನೇಮಕ ಮಾಡಲಿದ್ದೇನೆ. ವಿವಿಧ ಇಲಾಖೆಗೆ ಸಂಬಂಧಿಸಿದಂತೆ ಅರ್ಜಿ ಸ್ವೀಕರಿಸಲು, ಮಾಹಿತಿ ನೀಡಲು, ಜನರಿಗೆ ಸ್ಪಂದನೆ ನೀಡಲು ಮತ್ತು ನಗರಸಭಾ ವ್ಯಾಪ್ತಿಯಲ್ಲಿರುವ ಜನರಿಗೆ ಸೇವೆ ಸಲ್ಲಿಸಲು ಬೇರೆ ಬೇರೆ ಕೌಂಟರ್‌ಗಳನ್ನು ಮಾಡಿ ಕಚೇರಿಯಲ್ಲಿ ಸಿಬಂದಿಗಳು ಸೇವೆ ಸಲ್ಲಿಸಲಿದ್ದಾರೆ. ಕಚೇರಿಗೆ ಬರುವ ಮಂದಿಗೆ ಕಚೇರಿಯಲ್ಲಿ ಶಾಸಕರಿಲ್ಲದೇ ಇದ್ದರೂ ಅವರ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯಬೇಕು ಮತ್ತು ಶಾಸಕರಿಲ್ಲದೇ ಇರುವ ಸಂದರ್ಭದಲ್ಲಿ ಬಂದ ಕೆಲಸ ಆಗಿಲ್ಲ ಎಂದು ಯಾರೂ ನೊಂದು ಕೊಳ್ಳುವಂತಾಗಬಾರದು. ದೂರದ ಊರುಗಳಿಂದ ಶಾಸಕರನ್ನು ಭೇಟಿಯಾಗಲು ಬರುವ ಸಾರ್ವಜನಿಕರು ತಮ್ಮ ಕೆಲಸ ಆಗದೆ ಯಾರೂ ಬರಿಗೈಯ್ಯಲ್ಲಿ ತೆರಳುವಂತಾಗಬಾರದು ಎಂಬ ಉದ್ದೇಶದಿಂದ ಕಚೇರಿಯಲ್ಲಿ ಎಲ್ಲಾ ಸೇವೆಗಳು ಲಭ್ಯವಾಗಲಿದೆ ಎಂದು ಶಾಸಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!