ಸರಕಾರಿ ಬಸ್’ನಿಂದ ಬಿದ್ದು ಪ್ರೌಢಶಾಲೆ ವಿದ್ಯಾರ್ಥಿನಿ ಮೃತ್ಯು
ಸರ್ಕಾರಿ ಬಸ್ ನಿಂದ ಬಿದ್ದು ಪ್ರೌಢಶಾಲೆ ವಿದ್ಯಾರ್ಥಿನಿಯೋರ್ವರು ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕುಸನೂರು ಗ್ರಾಮದಲ್ಲಿ ನಡೆದಿದೆ. ಮಧು ಕುಂಬಾರ(14. ವ) ಮೃತ ವಿದ್ಯಾರ್ಥಿನಿ.

ವಾಸನ ಗ್ರಾಮದಿಂದ ಕುಸನೂರು ಶಾಲೆಗೆ ಹೋಗಲು ಸರ್ಕಾರಿ ಬಸ್ ಹತ್ತಿದ್ದ ವಧು, ರಶ್ ಇದ್ದುದರಿಂದ ಬಾಗಿಲ ಬಳಿ ನಿಂತಿದ್ದಳು. ಆದ್ರೆ, ನಿಯಂತ್ರಣ ತಪ್ಪಿ ಬಸ್ನಿಂದ ಬಿದ್ದು ಸಾವನ್ನಪ್ಪಿದ್ದಾಳೆ.
ಬಸ್ ಮಹಿಳೆಯರು ಸೇರಿದಂತೆ ಶಾಲಾ ಮಕ್ಕಳಿಂದ ತುಂಬಿತ್ತು. ಈ ಹಿನ್ನೆಲೆಯಲ್ಲಿ ಮಧು ಬಸ್ ಬಾಗಿಲು ಬಳಿ ನಿಂತುಕೊಂಡಿದ್ದಳು. ರಸ್ತೆ ತಿರುವಿನಲ್ಲಿ ಮಧು ಕೈಜಾರಿ ನೆಲಕ್ಕೆ ಬಿದ್ದಿದ್ದಾಳೆ. ಮೃತ ಮಧು ಪೋಷಕರು, ಸರ್ಕಾರಿ ಬಸ್ ಚಾಲಕನ ವಿರುದ್ಧ ಆಡೂರು ಪೊಲೀಸ್ ಠಾಣೆಗಯಲ್ಲಿ ದೂರು ದಾಖಲಿಸಿದ್ದಾರೆ.





